ಚುನಾವಣೆ ನೀತಿಸಂಹಿತೆ: ಜಾಥಾ ನಡೆಸುವ ವೇಳೆ ಪಾಲಿಸಬೇಕಾದ ಕ್ರಮಗಳು
0
ಮಾರ್ಚ್ 24, 2019
ಕಾಸರಗೋಡು: ಚುನಾವಣೆ ಪ್ರಚಾರ ಜಾಥಾ ನಡೆಸುವ ವೇಳೆ ನೀತಿಸಂಹಿತೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕಾದ ಮಾನದಂಡಗಳಿವೆ.
ಜಾಥಾ ನಡೆಸುವ ವೇಳೆ ತಗುಲುವ ಸಮಯ, ಯಾವೆಲ್ಲ ದಾರಿಗಳ ಮೂಲಕ ಪರ್ಯಟನೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರದೇಶವೊಂದರ ಪ್ರತ್ಯೇಕ ಹಿನ್ನೆಲೆಯಲ್ಲಿ ಜಿಲ್ಲಾಡಳಿತೆ ಪ್ರಕಟಿಸುವ ಆದೇಶಗಳನ್ನು, ಸಂಚಾರ ನಿಯಂತ್ರಣಗಳನ್ನು ತಪ್ಪದೇ ಪಾಲಿಸಬೇಕು. ಮಾರ್ಗದಲ್ಲಿ ಸಹಜ ಸಂಚಾರಕ್ಕೆ ಮೊಟಕು ಬಾರದಂತೆ ಜಾಥಾ ನಡೆಸುವವರು ಮುಂಚಿತವಾಗಿಯೇ ಜಾಗರೂಕತೆ ಪಾಲಿಸಬೇಕು. ಮೆರವಣಿಗೆ ಉದ್ದವಾಗಿದ್ದರೆ ಸಾರ್ವಜನಿಕರ ಸಂಚಾರಕ್ಕೆ ತಡೆಯಾಗದಂತೆ ನೋಡಿಕೊಳ್ಳಬೇಕು. ರಸ್ತೆಯ ಬಲಭಾಗದಲ್ಲಿಮಾತ್ರ ಜಾಥಾ ಸಂಚರಿಸಬೇಕು. ಕರ್ತವ್ಯದಲ್ಲಿರುವ ಪೊಲೀಸರುನೀಡುವ ಆದೇಶಗಳನ್ನು ಪಾಲಿಸಬೇಕು. ಎರಡು ಅಥೌಆ ಅದಕ್ಕಿಂತ ಅಧಿಕ ಸಂಖ್ಯೆಯ ರಾಜಕೀಯಪಕ್ಷಗಳು ಒಂದೇ ಪ್ರದೇಶದಲ್ಲಿ ಒಂದೇ ಅವಧಿಯಲ್ಲಿ ಪ್ರಚಾರ ಜಾಥಾ ನಡೆಸುವುದಿದ್ದಲ್ಲಿ, ಪರಸ್ಪರ ಸಂಘರವುಂಟಾಗದಂತೆ, ಸಂಚಾರ ಮೊಟಕುಸಂಭವಿಸದಂತೆ ಪೊಲೀಸರು, ಅಧಿಕಾರಿಗಳು ಜಂಟಿ ಕ್ರಮಗಳನ್ನು ಕೈಗೊಳ್ಳಬೇಕು. ಮೆರವಣಿಗೆಯ ವೇಳೆ ಕಾರ್ಯಕರ್ತರು ಕಾನೂನು ಉಲ್ಲಂಘಿಸುವಂಥಾ ರೀತಿಯಲ್ಲಿ ವರ್ತಿಸದಂತೆ ರಾಜಕೀಯಪಕ್ಷಗಳು, ಅಭ್ಯರ್ಥಿಗಳು ಜಾಗ್ರತೆ ಪಾಲಿಸಬೇಕು. ಸ್ಪರ್ಧಾಳು ಅಭ್ಯರ್ಥಿಯ, ಪಕ್ಷದ ನೇತಾರರ ಪ್ರತಿಕೃತಿ ದಹನ ಇತ್ಯಾದಿನಡೆಸಕೂಡದು ಎಂದು ನೀತಿಸಂಹಿತೆಯಲ್ಲಿ ತಿಳಿಸಲಾಗಿದೆ.

