ವಿದ್ಯಾರ್ಥಿಗಳ ಭವಿತವ್ಯಕ್ಕೆ ಭದ್ರ ಬುನಾದಿ ನೀಡಲು ಸಿದ್ಧವಾಗಿರುವ ಕೆರಿಯರ್ ಗೈಡೆನ್ಸ್ ಸೆಲ್
0
ಮಾರ್ಚ್ 24, 2019
ಕಾಸರಗೋಡು: ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕ ಕೋರ್ಸ್ ಆಯ್ಕೆಮಾಡಿಕೊಳ್ಳಲು , ಉನ್ನತ ಅಕಾಡೆಮಿಕ್ ಅರ್ಹತೆಯೊಂದಿಗೆ ಭವಿಷ್ಯ ಸಿದ್ಧಪಡಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆರಿಯರ್ ಗೈಡೆನ್ಸ್ ಸೆಲ್ ಆರಂಭಿಸಲಾಗಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಶೇಷಕಾಳಜಿಯ ಹಿನ್ನೆಲೆಯಲ್ಲಿ ಸೆಲ್ ತನ್ನ ಚಟುವಟಿಕೆ ಪ್ರಾರಂಭಿಸಿದೆ. ಜಿಲ್ಲೆಯಲ್ಲಿ ಶಾಲೆ-ಕಾಲೇಜು ಮಟ್ಟದಲ್ಲಿ ಅರ್ಧದಲ್ಲೇ ಶಿಕ್ಷಣಮೊಟಕುಗೊಳಿಸುವ ಮಕ್ಕಳನ್ನು ಗಮನಿಸಿ, ಸರಕಾರಿ ಸಿಬ್ಬಂದಿಯ ಗಣನೆಯಲ್ಲಿ ಜಿಲ್ಲೆಯ ಮಂದಿಯ ಸಂಖ್ಯೆ ಕಡಿಮೆಯಾಗಿರುವ ವಿಚಾರ ಮನಗಂಡು ಈ ಹೆಜ್ಜೆಗಾರಿಕೆ ನಡೆಸಲಾಗಿದೆ. ಶಿಕ್ಷಣ ಅರ್ಧದಲ್ಲೇ ಮೊಟಕುಗೊಳಿಸಲು ಪ್ರಧಾನ ಕಾರಣವಾಗಿರುವುದು ವಿದ್ಯಾರ್ಥಿಗಳ ಆಸಕ್ತಿಗೆ, ಬೌದ್ಧಿಕ ಮಟ್ಟಕ್ಕೆ ತಕ್ಕ ಕೋರ್ಸ್ ಗಳು ಲಭಿಸದೇ ಇರುವುದು. ಈ ಸೆಲ್ ನ ಚಟುವಟಿಕೆಗಳ ಮೂಲಕ ಒಮದುಹಂತದ ವರೆಗೆ ಶಿಕ್ಷ ಮೊಟಕನ್ನು ತಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಭಿಪ್ರಾಯಪಡುತ್ತಾರೆ.
ವೈವಿಧ್ಯಮಯ ಶಿಕ್ಷಣ ಅರ್ಹತೆಗೆ ತಕ್ಕಂತೆ ದೇಶದಲ್ಲಿ ಮತ್ತು ವಿದೇಶಗಳಲ್ಲಿ ಹೆರಸು ಪಡೆದಿರುವ ಸಂಸ್ಥೆಗಳಲ್ಲಿ ಪ್ರವೇಶಾತಿ, ಉದ್ಯೋಗ ಕೇಂದ್ರಿತ ಶಿಕ್ಷಣಗಳು, ತರಬೇತಿಯ ಕಾಲಾವಧಿ, ವೆಚ್ಚ, ಅರ್ಜಿ ಸಲ್ಲಿಸಬೇಕಾದ ರೀತಿಗಳು, ಸಮಯ, ಅವುಗಳ ಆಯ್ಕೆ ಇತ್ಯಾದಿ ಸಮಗ್ರ ಮಾಹಿತಿ ಈ ಸೆಲ್ ನಲ್ಲಿ ಲಭ್ಯವಿದೆ.
ಚಟುವಟಿಕೆ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಪರಿಣತರು ಈ ಸೆಲ್ ನಲ್ಲಿ ಕರ್ತವ್ಯದಲ್ಲಿರುವರು. ವಿದ್ಯಾರ್ಥಿಗಳು ಮತ್ತು ಹೆತ್ತವರು ಈ ಸೌಲಭ್ಯದ ಗರಿಷ್ಠ ಮಟ್ಟದ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ವಿನಂತಿಸಿದ್ದಾರೆ.

