ಬದಿಯಡ್ಕ: ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದ ವರ್ಷಾವಧಿ ಮಹೋತ್ಸವದ ಸಂದರ್ಭದಲ್ಲಿ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಸುಗಮ ಸಂಗೀತ ವಿಭಾಗದ ವಿದ್ಯಾರ್ಥಿಗಳ ಭಜನಾ ತಂಡದಿಂದ ಭಜನಾ ಸಂಕೀರ್ತನೆ ನಡೆಯಿತು. ಸುಗಮ ಸಂಗೀತ ಶಿಕ್ಷಕಿ ಡಾ. ಸ್ನೇಹಾ ಪ್ರಕಾಶ್ ಪೆರ್ಮುಖ ಅವರ ಗರಡಿಯಲ್ಲಿ ಪಳಗಿದ ರಂಗಸಿರಿಯ ವಿದ್ಯಾರ್ಥಿಗಳಾದ ಅನ್ವಿತ ತಲ್ಪನಾಜೆ, ಸಮನ್ವಿತ ವಳಕುಂಜ, ಅನಘ್ರ್ಯಶ್ರೀ ಇಕ್ಕೇರಿ, ಸೃಜನ್ ಕೇಶವ ಚಂಬಲ್ತಿಮಾರ್, ಪ್ರಗತಿ ಶರ್ಮ ಪಂಜಿತ್ತಡ್ಕ, ಧನ್ಯಶ್ರೀ ಕನಕಪ್ಪಾಡಿ, ನವ್ಯಶ್ರೀ ಕನಕಪ್ಪಾಡಿ ಭಕ್ತಿಭಾವ ಭರಿತವಾಗಿ ಭಜನಾ ಕಾರ್ಯಕ್ರಮವನ್ನು ನಡೆಸಿದರು. ಉದಯೋನ್ಮುಖ ಕಲಾವಿದ ವಿಶ್ವಾಸ್ ಪದ್ಯಾಣ ಮೃದಂಗ ಸಾಥ್ ನೀಡಿದರು.
ಬಳಿಕ ರಂಗಸಿರಿಯ ಹಿರಿಯ ಸದಸ್ಯರಿಂದ ಧುರವೀಳ್ಯ ಪ್ರಸಂಗ ಯಕ್ಷಗಾನ ತಾಳಮದ್ದಳೆ ನಡೆಯಿತು.ಪಾತ್ರವರ್ಗದಲ್ಲಿ ಕುಂಟಾರು ಮಾಧವ, ಬೆಳ್ಳಿಗೆ ನಾರಾಯಣ ಮಣಿಯಾಣಿ, ಕರಿಂಬಿಲ ಲಕ್ಷ್ಮಣ ಪ್ರಭು ಪ್ರಸಂಗದ ಯಶಸ್ಸಿಗೆ ಕಾರಣರಾದರು. ಭಾಗವತರಾಗಿ ಗೋವಿಂದ ಭಟ್ ಬೇಂದ್ರೋಡು, ಚೆಂಡೆ ಮದ್ದಳೆಗಳಲ್ಲಿ ಶಿವಶಂಕರ ಭಟ್ ಅಂಬೆಮೂಲೆ ಮತ್ತು ರಾಘವ ಬಲ್ಲಾಳ್ ಸಹಕರಿಸಿದರು.


