ಉಪ್ಪಳ: ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಶ್ರೀ ಸತ್ಯಸಾಯಿಬಾಬಾರವರ ಎಂಟನೆಯ ವರ್ಷದ ಆರಾಧನಾ ಮಹೋತ್ಸವವು ಬುಧವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಮಹಾನಾರಾಯಣ ಸೇವೆ ನೆರವೇರಿತು. ಸುಮಾರು 500ಕ್ಕಿಂತಲೂ ಅಧಿಕ ಆಹಾರಪೊಟ್ಟಣಗಳನ್ನು ಬಾಯಾರುನಗರದಲ್ಲಿ ಸಾರ್ವಜನಿಕರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಕೋಶಾಧಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್, ಆಡಳಿತ ಟ್ರಸ್ಟಿ ಹಿರಣ್ಯ ಮಹಾಲಿಂಗ ಭಟ್, ಸಮಿತಿ ಸಂಚಾಲಕ ಕಟ್ಟದಮನೆ ಗೋಪಾಲಕೃಷ್ಣ ಭಟ್, ಪ್ರಾಂಶುಪಾಲ ಅನೂಪ್.ಕೆ, ನಿಲಯಪಾಲಕ ಶ್ರೀಕೃಷ್ಣ ನಾಯಕ್ ಹಾಗೂ ಸಮಿತಿ ಸದಸ್ಯರು ಮತ್ತು ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಬಳಿಕ ಭಜನಾ ಸಂಕೀರ್ತನೆ ಹಾಗೂ ಅರ್ಹ ಫಲಾನುಭವಿಗಳಿಗೆ ಅಮೃತ ಕಲಶಗಳನ್ನು ವಿತರಿಸಲಾಯಿತು.


