HEALTH TIPS

ಮುನ್ನೂರು ಪಳ್ಳದಲ್ಲಿ ದೈವಗಳ ಆಯುಧ ಪ್ರತಿಷ್ಠೆ, ದೈವದ ಕೋಲ

 
    ಉಪ್ಪಳ: ಕುಡಾಲುಮೇರ್ಕಳ ಮುನ್ನೂರು ಪಳ್ಳದ ಕುಪ್ಪೆ ಪಂಜುರ್ಲಿ, ಅಣ್ಣಪ್ಪ ಪಂಜುರ್ಲಿ, ಮುಕಾಂಬಿಕ ಗುಳಿಗ, ಕಲ್ಲುರ್ಟಿ ಹಾಗೂ ಕಲಾಲ್ದ ಗುಳಿಗ ದೈವಗಳ ತರವಾಡು ಮನೆಯ ಗೃಹ ಪ್ರವೇಶ, ದೈವಗಳ ಆಯುಧ ಪ್ರತಿಷ್ಠೆ ಮತ್ತು ದೈವದ ಕೋಲ ಏ.27 ರಿಂದ 30 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
    ಕಾರ್ಯಕ್ರಮದ ಅಂಗವಾಗಿ ಏ.27 ರಂದು  ರಾತ್ರಿ 7 ಕ್ಕೆ ಪ್ರಾರ್ಥನೆ, ಪ್ರಸಾದ ಪರಿಗ್ರಹ, ಬಿಂಬ ಪರಿಗ್ರಹ, ಪ್ರಸಾದ ಶುದ್ಧಿ. ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ ಇತ್ಯಾದಿ, ಏ.28 ರಂದು ಬೆಳಿಗ್ಗೆ 7 ರಿಂದ ಗಣಪತಿ ಹವನ, ಬಿಂಬ ಶುದ್ಧಿ, ಖನನಾದಿ ಸಪ್ತ ಶುದ್ಧಿ, 10.04 ಕ್ಕೆ ಗೃಹ ಪ್ರವೇಶ, ಮುಡಿಪು ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12 ಕ್ಕೆ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ, 12.32 ಕ್ಕೆ ದೈವಗಳ ಪ್ರತಿಷ್ಠೆ(ಭೂತಗಳ ಪ್ರತಿಷ್ಠೆ), ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಅನ್ನಪ್ರಸಾದ ವಿತರಣೆ, ರಾತ್ರಿ 7 ರಿಂದ ದುರ್ಗಾ ನಮಸ್ಕಾರ ಪೂಜೆ, 9 ಕ್ಕೆ ಅನ್ನಪ್ರಸಾದ ವಿತರಣೆ ನಡೆಯಲಿದೆ.
   ಏ.29 ರಂದು ರಾತ್ರಿ 7 ರಿಂದ ಶ್ರೀ ದೈವಗಳ ಭಂಡಾರ ಏರುವುದು, 8 ಕ್ಕೆ ಅನ್ನ ಸಂತರ್ಪಣೆ, 9.30 ರಿಂದ ಕುಪ್ಪೆ ಪಂಜುರ್ಲಿ, ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ, ಮುಕಾಂಬಿಕ ಗುಳಿಗ, ದೈವಗಳ ಕೋಲ, ಏ.30 ರಂದು ಸಂಜೆ 6 ಕ್ಕೆ ಶ್ರೀ ಕಲಾಲ್ದ ಗುಳಿಗ ಕೋಲ, ಅನ್ನಸಂತರ್ಪಣೆ, ಮೇ 3 ರಂದು ರಾತ್ರಿ 7 ಕ್ಕೆ ಸುದರ್ಶನ ಹೋಮ, ಅನ್ನಸಂತರ್ಪಣೆ, ಮೇ 4 ರಂದು ರಾತ್ರಿ 7 ಕ್ಕೆ ತಿಲಹೋಮ, ಅನ್ನಸಂತರ್ಪಣೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries