ಬದಿಯಡ್ಕ: ನೀರ್ಚಾಲು ಸಮೀಪದ ಉಳ್ಳೋಡಿ ಕಜಳ ಶ್ರೀಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಕಾರ್ಯಕ್ರಮಗಳು ತಂತ್ರಿ ತುಂಗ ಅನಂತಪದ್ಮನಾಭ ಭಟ್ ಬನ್ನೂರು ಅವರ ನೇತೃತ್ವದಲ್ಲಿ ಗುರುವಾರ ಆರಂಭಗೊಂಡಿತು.
ಗುರುವಾರ ಬೆಳಿಗ್ಗೆ 7ಕ್ಕೆ ಪುಣ್ಯಾಹ, ಗಣಪತಿ ಹೋಮ, 9ಕ್ಕೆ ಉಗ್ರಾಣ ತುಂಬಿಸುವುದು, ಸಂಜೆ 4ಕ್ಕೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, 5ಕ್ಕೆ ಕೊಲ್ಲಂಗಾನ ಶ್ರೀಶಾರದಾ ಭಜನಾ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮನ, 5.30ಕ್ಕೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಸ್ಥಳಶುದ್ದಿ, ವಾಸ್ತುಹೋಮ, ವಾಸ್ತುಬಲಿ, 6ಕ್ಕೆ ದೇವರಕೆರೆ ಶ್ರೀರಕ್ತೇಶ್ವರಿ ಮತ್ತು ಪರಿವಾರ ದೈವ ಸನ್ನಿಧಿ ಪರಿಸರದಿಂದ ಹಸಿರುವಾಣಿ ಹೊರೆಕಾಣಿಕೆ ಆಗಮನ, ರಾತ್ರಿ ಅನ್ನದಾನಗಳು ನಡೆಯಿತು.
ಶುಕ್ರವಾರ ಬೆಳಿಗ್ಗೆ ಪುಣ್ಯಾಹ, ಗಣತಿಹೋಮ, ಕಲಶ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ ಮತ್ತು ಕಲಶಾಭಿಷೇಕಗಳು ನೆರವೇರಿದವು. ಬಳಿಕ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ನಿತ್ಯ ನೈಮಿತ್ತಿಕ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆಗಳು ನಡೆಯಿತು.ಸಂಜೆ 3 ರಿಂದ ಕಜಳ ಶ್ರೀಚಾಮುಂಡೇಶ್ವರಿ ಭಜನಾ ಸಂಘ ಕೊಲ್ಲಂಗಾನ ಶ್ರೀಶಾರದಾ ಭಜನಾ ಮಂಡಳಿ, ನೀರ್ಚಾಲು ಶ್ರೀಧರ್ಮಶಾಸ್ತಾ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆಗಳು ನಡೆಯಿತು. ಸಂಜೆ 6ರಿಂದ ಶ್ರೀದುರ್ಗಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಗಳು ನಡೆಯಿತು. ರಾತ್ರಿ ಬದಿಯಡ್ಕದ ಶ್ರೀಶಾರದಾಂಬ ಯಕ್ಷಗಾನ ಕಲಾ ಮಂಡಳಿಯವರಿಂದ ಜಯರಾಮ ಪಾಟಾಳಿ ಪಡುಮಲೆ ಅವರ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ನಡೆಯಿತು.
ಇಂದಿನ ಕಾರ್ಯಕ್ರಮ:
ಶನಿವಾರ ಬೆಳಿಗ್ಗೆ 7ಕ್ಕೆ ಚಂಡಿಕಾ ಹೋಮ, ಮಧ್ಯಾಹ್ನ ಪೂರ್ಣಾಹುತಿ, ಪ್ರಾರ್ಥನೆ, ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ 3ರಿಂದ ಭಜನಾ ಸಂಕೀರ್ತನೆ, 6 ರಿಂದ ನೃತ್ಯ ವೈವಿಧ್ಯ, 7 ರಿಂದ ್ಆರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ಅನ್ನಸಂತರ್ಪಣೆ, 9.15 ರಿಂದ ನೃತ್ಯಾರ್ಚನೆ, 10 ರಿಂದ ತುಳು ನಾಟಕ ಪ್ರದರ್ಶನ ನಡೆಯಲಿದೆ.



