ಕುಂಬಳೆ: ಸೀತಾಂಗೋಳಿಯ ಮಾಲಿಕ್ ದೀನಾರ್ ಕಾಲೇಜ್ ಆಫ್ ಗ್ರಾಜ್ಯುವೇಟ್ ಸ್ಟಡೀಸ್‍ನ ಸ್ಮರಣ ಸಂಚಿಕೆ `ಕ್ರಸಂಟೋ' ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಟಿ.ಎ.ಶಾಫಿ ಅವರು ಕಾಲೇಜು ಪ್ರಾಂಶುಪಾಲ ಉದಯ ಕುಮಾರ್ ಅವರಿಗೆ ಪ್ರಥಮ ಪ್ರತಿಯನ್ನು ಹಸ್ತಾಂತರಿಸಿ ಬಿಡುಗಡೆಗೊಳಿಸಿದರು.
ಕಾಸರಗೋಡು ಸಾಹಿತ್ಯವೇದಿ ಸದಸ್ಯ ಸಿ.ಎಲ್.ಹಮೀದ್ ಉಪಸ್ಥಿತರಿದ್ದರು. ಸಂಪಾದಕಿ ಉಷಾಶ್ರೀ, ವಿದ್ಯಾರ್ಥಿ ಪ್ರತಿನಿಧಿ ಅಖಿಲ್ ಮೊೈದೀನ್ ಮಾತನಾಡಿದರು. ಸ್ಮರಣ ಸಂಚಿಕೆ ಬಿಡುಗಡೆಯ ಬಳಿಕ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು.


