ಮಂಜೇಶ್ವರ : ಮಂಗಳವಾರ ನಿಧನರಾದ ಹಿರಿಂiÀi ಸಾಮಾಜಿಕ ಮುಂದಾಳು ಬಿ.ಮೊಹಮ್ಮದ್ ಶ್ರದ್ಧಾಂಜಲಿ ಸಭೆಯು ಹೊಸಂಗಡಿ ಗೇಟ್ ವೇ ಸಭಾಂಗಣದಲ್ಲಿ ನಡೆಯಿತು.
ಮಂಜೇಶ್ವರ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೇತೃತ್ವದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ ಬಶೀರ್ ಜಂಕ್ಷನ್ ಅಧ್ಯಕ್ಷತೆ ವಹಿಸಿದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳಾದ ಬಿ.ವಿ ರಾಜನ್, ಕೆ.ಆರ್ ಜಯಾನಂದ, ಸತೀಶ್ ಅಡಪ ಸಂಕಬೈಲು, ಇಕ್ಬಾಲ್, ಯಾಕೂಬ್ ಕುಂಜತ್ತೂರು, ಪತ್ರಕರ್ತ ಆರಿಫ್ ಮಚ್ಚಂಪಾಡಿ, ಸೊಸೈಟಿಯ ಕಾರ್ಯದರ್ಶಿ ನಾರಾಯಣ, ವ್ಯಾಪಾರಿ ಕಾರ್ಯದರ್ಶಿ ಹಮೀದ್ ಸಹಿತ ಹಲವರು ಮಾತನಾಡಿದರು.



