HEALTH TIPS

ಕಳನಾಡು : ಪ್ರತಿಷ್ಠಾ ಬ್ರಹ್ಮಕಲಶೋತ್ಸವ

         
    ಕಾಸರಗೋಡು: ಕಳನಾಡು ಮರಬೈಲು ಕಾವೇರಿತೋಟದ ಶ್ರೀ ಆದಿಶಕ್ತಿ ಕಾಲಭೈರವೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದ ದೇಗುಲ ಸಮುಚ್ಛಯದ ಆದಿಶಕ್ತಿ, ಕಾಲಭೈರವೇಶ್ವರ ಹಾಗೂ ನಾಗ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಯಾಗ, ನವ ಚಂಡಿಕಾ ಯಾಗ ಮೇ 9 ರಿಂದ 13 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
        ಮೇ 9 ರಂದು ಬೆಳಗ್ಗೆ 11 ರಿಂದ ನಾಗಪ್ರತಿಷ್ಠೆ, ಮೇ 11 ರಂದು ಸಂಜೆ 6 ಕ್ಕೆ ಬ್ರಹ್ಮಶ್ರೀ ಹಾರ್ನಾಡು ದಾಮೋದರ ತಂತ್ರಿಯವರಿಗೆ ಪೂರ್ಣಕುಂಭ ಸ್ವಾಗತ, ರಾತ್ರಿ 7 ರಿಂದ ಸಾಮೂಹಿಕ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಮೇ 12 ರಂದು ಬೆಳಗ್ಗೆ 6 ಕ್ಕೆ  ಗಣಪತಿ ಹೋಮ, ಸ್ಥಳಶುದ್ಧಿ, ಬಿಂಬ ಶುದ್ಧಿ, ಮಂಟಪ ಸಂಸ್ಕಾರ, ಕುಂಭೇಶ ಕರ್ಕರಿ ಪೂಜೆ, ಶಯ್ಯಾ ಪೂಜೆ, ಜೀವೋಧ್ವಾಸನ, 8 ರಿಂದ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ನವಚಂಡಿಕಾ ಯಾಗದ ಸಂಕಲ್ಪ, 9 ಕ್ಕೆ ಕಲಶ ಪ್ರತಿಷ್ಠೆ, ಸಪ್ತಶತಿ ಪಾರಾಯಣ, 11 ಕ್ಕೆ ನಾಗತಂಬಿಲ, ಮಧ್ಯಾಹ್ನ 12 ಕ್ಕೆ ಕಲಶ ಪೂಜೆ, 3.30 ರಿಂದ ಸಪ್ತಶತಿ ಪಾರಾಯಣ, ಸಂಜೆ 5.30 ರಿಂದ ಅಷ್ಟಾವಧಾನ ಸೇವೆ, ಕಲಶ ಪೂಜೆ, 6 ರಿಂದ ಅಷ್ಟೋತ್ತರ ಸಹಸ್ರನಾಳಿಕೇರ ಗಣಯಾಗದ ಯಾಗ ಮಂಟಪದಲ್ಲಿ ಮಂಟಪ ಶುದ್ಧಿ, ಕುಂಡ ಶುದ್ಧಿ, ಪುಣ್ಯಾಹ ವಾಚನ, ಸಂಕಲ್ಪ, ಕಲಶ ಪ್ರತಿಷ್ಠೆ, ಅಗ್ನಿ ಪ್ರತಿಷ್ಠೆ, ಅಗ್ನಿ ಜನನ, ಸಂಜೆ 7 ರಿಂದ ತ್ರಿಕಾಲ ಪೂಜೆ, ಅ„ವಾಸ ಹೋಮ, ಕಲಶ ಪೂಜೆ, ಮಂಡಲ ಪೂಜೆ, ಭಜನೆ ನಡೆಯಲಿದೆ.
     ಮೇ 13 ರಂದು ಬೆಳಗ್ಗೆ 5 ಕ್ಕೆ ಗಣಪತಿ ಹೋಮ, 6 ಕ್ಕೆ ಸಹಸ್ರ ನಾಳಿಕೇರ ಗಣಯಾಗ ಹಾಗು ನವ ಚಂಡಿಕಾ ಯಾಗ, 7.10 ರಿಂದ ಶ್ರೀ ದೇವರ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, 11.30 ಕ್ಕೆ ಸಹಸ್ರ ನಾಳಿಕೇರ ಗಣಯಾಗ ಪೂರ್ಣಾಹುತಿ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1 ರಿಂದ ಅನ್ನಸಂತರ್ಪಣೆ ಜರಗಲಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries