ಮಂಜೇಶ್ವರ: ಕೃಷಿ, ರಂಗಭೂಮಿ, ಸಾಹಿತ್ಯ, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಚಿಂತಕ ಡಾ.ದರ್ಭೆ ಕೃಷ್ಣಾನಂದ ಚೌಟ(ಡಿ.ಕೆ.ಚೌಟ)ರ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಕಾರ್ಯಕ್ರಮ ನಾಳೆ ಸಂಜೆ(ಬುಧವಾರ) 4ಕ್ಕೆ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಆವರಣದಲ್ಲಿ ನಡೆಯಲಿದೆ. ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ನ ಸಮರ್ಥ ಸಾರಥಿಯಾಗಿ, ಕೇರಳ ಕರ್ನಾಟಕ ರಾಜ್ಯಗಳ ಸಾಂಸ್ಕೃತಿಕ ರಾಯಭಾರಿಯಾಗಿದ್ದರಲ್ಲದೆ ಕಲಾ ಪೋಷಕರೂ ತುಳು-ಕನ್ನಡ ಸಂಸ್ಕೃತಿಯ ಅನಭಿಷಿಕ್ತ ವಕ್ತಾರರೂ ಆಗಿದ್ದರು. ಕೃಷಿಗೆ ಆಧುನಿಕ ಕೃಷಿ ವಿಜ್ಞಾನವನ್ನು ಅಳವಡಿಸಿ ಪಾರಂಪರಿಕ ಬೇಸಾಯ ಸಂಸ್ಕೃತಿಗೆ ಹೊಸ ಚಾಲನೆಯನ್ನು ನೀಡಿರುವುದು ನೆಲದ ಸಂಸ್ಕೃತಿಯ ಮೇಲಿನ ಇವರ ಕಾಳಜಿಗೆ ಸಾಕ್ಷಿಯಾಗಿದೆ. ಡಾ.ಚೌಟರ ಬಹುಮುಖ ಆಯಾಮದ ನೆನಪುಗಳೊಂದಿಗೆ ಈ ನುಡಿನಮನ ನಡೆಯಲಿದೆ ಎಂದು ಗಿಳಿವಿಂಡಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗಿಳಿವಿಂಡಿನಲ್ಲಿ ನಾಳೆ ಶ್ರದ್ದಾಂಜಲಿ
0
ಜೂನ್ 24, 2019