ಮುಳ್ಳೇರಿಯ: ಕಿನ್ನಿಂಗಾರು ಪನೆಯಾಲ ಶ್ರೀ ವನಶಾಸ್ತಾರ ಮತ್ತು ಪರಿವಾರ ಶಕ್ತಿಗಳ ಪುನಃಪ್ರತಿಷ್ಠಾ ಹಾಗೂ ಬ್ರಹ್ಮಕಲಶೋತ್ಸವ ಮಹೋತ್ಸವವು ಶುಕ್ರವಾರ ಸಂಪನ್ನಗೊಂಡಿತು.
ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಹಾಗೂ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ತಾಂತ್ರಿಕ ವಿಧಿಗಳು ನೆರವೇರಿದವು. ಪ್ರಾತಃಕಾಲ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆಯಿತು. 10.21ರ ಸಿಂಹ ಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠಾ ವಿಧಿಗಳನ್ನು ಪೂರೈಸಿ ಜೀವಕಲಶ ಅಭಿಷೇಕ ಮಾಡಲಾಯಿತು. ಸಾನ್ನಿಧ್ಯ ಶಕ್ತಿಗಳಾದ ಧೂಮಾವತಿ, ರಕ್ತೇಶ್ವರಿ, ಗುಳಿಗ ಮತ್ತು ನಾಗದೇವತಾ ಪ್ರತಿಷ್ಠೆ ಹಾಗೂ ಅಭಿಷೇಕದ ಬಳಿಕ ಶ್ರೀ ವನಶಾಸ್ತಾರನಿಗೆ ಬ್ರಹ್ಮಕಲಶಾಭೀಷೇಕ ನೆರವೇರಿಸಲಾಯಿತು.
ಪ್ರತಿಷ್ಠೆಯ ಸಂದರ್ಭದಲ್ಲಿ ಶ್ರೀ ದೇವರಿಗೆ ಅಷ್ಟದರ್ಶನದ ಭಾಗವಾಗಿ ಗೋವು, ಕೈಗನ್ನಡಿ, ಪೂರ್ಣಕುಂಭ, ಉಭಯಚಾಮರ, ಶ್ರೀವತ್ಸ, ಸ್ವಸ್ತಿಕ, ಶಂಖ ಹಾಗೂ ದೀಪ ದರ್ಶನಗೈಯಲಾಯಿತು. ಪ್ರತಿಷ್ಠಾಬಲಿ, ನಿತ್ಯನೈಮಿತ್ತಿಕ ವಿಧಿ ನಿರ್ಣಯ, ಪ್ರಾರ್ಥನೆ, ಮಹಾಪೂಜೆ, ಮಹಾಮಂತ್ರಾಕ್ಷತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಕಿನ್ನಿಂಗಾರು ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ಧೂಮಾವತಿ ಭಜನಾ ಸಂಘದವರು ಭಜನಾ ಸೇವೆ ನಡೆಸಿಕೊಟ್ಟರು.



