ಕಾಸರಗೋಡು: ಕಳೆದ 1975 ಜೂ.25 ರಂದು ಅಂದಿನ ಪ್ರದಾನ ಮಂತ್ರಿಯಾಗಿದ್ದ ಇಂದಿರಾಗಾಂಧಿಯವರು ಮಧ್ಯರಾತ್ರಿ ದೇಶದಾದ್ಯಂತ ತುರ್ತುಪರಿಸ್ಥಿತಿ ಘೋಶಿಸಿ ವಾಕ್ ಸ್ವಾಂತತ್ರ್ಯ ಮಾಧ್ಯಮ ಸ್ವಾಂತತ್ರ್ಯವನ್ನು ಕಸಿಯಲೆತ್ನಿಸಿದ ವಿರುದ್ಧ ಸಂಘ ಪರಿವಾರದ ಕಾರ್ಯಕರ್ತರು ಇದನ್ನು ಸಂಘಟಿತರಾಗಿ ಪ್ರತಿಭಟಿಸಿದರು.ಅಧಿಕಾರದ ಯಾವುದೇ ಆಸೆ ಆಮಿಷಗಳಿಲ್ಲದೆ ಪ್ರತಿಫಲದ ಅಪೇಕ್ಷೆಯಿಲ್ಲದೆ ಪೆÇಲೀಸರ ಕ್ರೂರ ಹಿಂಸೆಯನ್ನು ಸಹಿಸಿ ಕೆಚ್ಚೆದೆಯಿಂದ ಹೋರಾಡಿದ ಸಂಘ ಪರಿವಾರ ಸ್ವಯಂಸೇವಕರ ಬಲಿದಾನ ಮತ್ತು ನಿಸ್ವಾರ್ಥಸೇವೆಯ ಪ್ರತಿಫಲವಾಗಿ ಇಂದು ಓರ್ವ ಸ್ವಯಂಸೇವಕ ದೇಶಪ್ರೇಮಿ ತುರ್ತುಪರಿಸ್ಥಿತಿ ಹೋರಾಟಗಾರ ದೇಶದ ಪ್ರದಾನಿಯಾಗಲು ಸಾಧ್ಯವಾಯಿತೆಂಬುದಾಗಿ ಬಿ.ಜೆ.ಪಿ.ಕಣ್ಣೂರು ವಲಯಾಧ್ಯಕ್ಷ ಪಿ.ಪಿ.ಕರುಣಾಕರನ್ ಮಾಸ್ತರ್ ಹೇಳಿದರು.
ಆಸೋಸಿಯೇಶನ್ ಆಫ್ ದಿ ಎಮರ್ಜೆನ್ಸಿ ವಿಕ್ಟಿಂಸ್ ಕೇರಳ ಇದರ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಟೌನ್ ಬ್ಯಾಂಕ್ ಸಭಾ ಭವನದಲ್ಲಿ ಜರಗಿದ 44 ನೇ ವರ್ಷದ ಪ್ರಜಾಪ್ರಭುತ್ವ ಸಂರಕ್ಷಣೆಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತುರ್ತುಪರಿಸ್ಥಿತಿ ಹೋರಾಟಗಾರರಿಗೆ ಬಿಜೆಪಿ ಆಡಳಿತ ನಡೆಸುವ ರಾಜ್ಯ ಸರಕಾರಗಳು ಪಿಂಚಣಿ ಮತ್ತು ಆರ್ಥಿಕ ನೆರವು ನೀಡುತ್ತಿದ್ದರೂ ವಿಪಕ್ಷ ಆಡಳಿತದ ಸರಕಾರಗಳು ಇದಕ್ಕೆ ಮುಂದಾಗಿಲ್ಲ.ಆದರೆ ಇದೀಗ ಕೇರಳ ಎಡರಂಗ ಸರಕಾರವು ಸಿ.ಪಿ.ಎಂ.ಪಕ್ಷದ ಅನರ್ಹರನ್ನು ಒಳಪಡಿಸಿ ಪಿಂಚಣಿ ನೀಡಲು ಮುಂದಾಗಿರುವ ಸರಕಾರ ವಂಚನೆಗೆ ಮುಂದಾಗಿರುವುದಾಗಿ ಅವರು ಆರೋಪಿಸಿದರು. ಆದುದರಿಂದ ರಾಜ್ಯದಾದ್ಯಂತ ಸುಮಾರು ಏಳು ಸಹಸ್ರದಷ್ಟು ಮಂದಿ ನೈಜ ತುರ್ತುಪರಿಸ್ಥಿತಿ ಹೋರಾಟ ನಡೆಸಿದವರು ಸಂಕಷ್ಟ ಜೀವನ ನಡೆಸುತ್ತಿರುವರು. ಇವರ ನೆರವಿಗೆ ಸರಕಾರ ಮುಂದಾಗಬೇಕು ಎಂದವರು ತಿಳಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ವಿ.ರವೀಂದ್ರನ್ ಅಧ್ಯಕ್ಷತೆ ವಹಿಸಿದರು.ರಾ.ಸ್ವ.ಸಂಘದ ಕಾಸರಗೋಡು ನಗರ ಸಂಘಚಾಲಕ್ ಕೆ.ಟಿ.ಕಾಮತ್,ಟೌನ್ ಬ್ಯಾಂಕ್ ಉಪಾಧ್ಯಕ್ಷ ಕೆ.ಎಂ.ಹೇರಳ,ಬಿಜೆ.ಪಿ.ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಎಂ.ಸಂಜೀವ ಶೆಟ್ಟಿ,ನ್ಯಾಯವಾದಿ ಕೆ.ಸುಂದರ ರಾವ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸಮಾರಂಭದಲ್ಲಿ ತುರ್ತುಪರಿಸ್ಥಿತಿ ಹೋರಾಟಗಾರರಿಗೆ ಸದಸ್ಯತನದ ಸರ್ಟಿಫಿಕೇಟ್‍ಗಳನ್ನು ವಿತರಿಸಲಾಯಿತು.ಅಗಲಿದ ರಾ.ಸ್ವ.ಸಂಘದ ಸಂಘ ಚಾಲಕ್‍ರಾಗಿದ್ದ ದಿನೇಶ್ ಮಡಪ್ಪುರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕಾರ್ಯದರ್ಶಿ ಅಚ್ಯುತ ಚೇವಾರ್ ಸ್ವಾಗತಿಸಿ, ಕೋಶಾಧಿಕಾರಿ ಎಂ.ಮಹಾಬಲ ರೈ ವಂದಿಸಿದರು.



