ಬದಿಯಡ್ಕ : ಇತಿಹಾಸ ಪ್ರಸಿದ್ಧ ಪುತ್ರಕಳ ಬೂಡಿನ ಜೀರ್ಣೋದ್ಧಾರ ಕಾರ್ಯ ಪ್ರಯುಕ್ತ ಆಯೋಜಿಸಿದ ಲಕ್ಕಿ ಕೂಪನ್ ಯೋಜನೆಯ ಆಯ್ಕೆ ಹಾಗೂ ದ್ವಿತೀಯ ಹಂತದ ಶ್ರಮದಾನ ಕಾರ್ಯ ಬೂಡು ಆಡಳಿತ ಹಾಗೂ ಜೀರ್ಣೋದ್ಧಾರ ಸಮಿತಿ, ವಿವಿಧ ಸಂಘ ಸಂಸ್ಥೆಗಳ ಸದಸ್ಯರ ನೇತೃತ್ವದಲ್ಲಿ ಜರಗಿತು. ಬೂಡಿನ ತಂತ್ರಿ ಮನೆತನದ ಅರವಿಂದ ಕುಮಾರ ಅಲೆವೂರಾಯ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಜೀರ್ಣೋದ್ಧಾರ ಕಾರ್ಯಗಳ ಅವಲೋಕನಗೈದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೇವಾನಂದ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬೂಡು ಆಡಳಿತ ಸಮಿತಿ ಗೌರವಾಧ್ಯಕ್ಷ ಬೈಂಕಿ ಭಂಡಾರಿ, ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರ ದೇರಣ್ಣ ರೈ ಪಿ.ವೈ, ಸದಾಶಿವ ಶೆಟ್ಟಿ ಪುತ್ರಕಳ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಸಮಿತಿ ಕಾರ್ಯದರ್ಶಿ ಹರ್ಷ ರೈ ಪುತ್ರಕಳ ಸ್ವಾಗತಿಸಿ, ಪ್ರಜ್ವಲ್ ರೈ ಪುತ್ರಕಳ ವಂದಿಸಿದರು. ಬಳಿಕ ಲಕ್ಕಿ ಕೂಪನ್ ಅದೃಷ್ಠಶಾಲಿಗಳ ಆಯ್ಕೆ ನಡೆಯಿತು. ಉಕ್ಕಿನಡ್ಕದ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಸೇವಾ ಸಮಿತಿ ಸದಸ್ಯರಿಂದ ಜೀರ್ಣೋದ್ಧಾರದ ಶ್ರಮದಾನ ಕಾಮಗಾರಿ ಜರಗಿತು.
ಪುತ್ರಕಳ ಬೂಡು ಲಕ್ಕಿ ಯೋಜನೆ- ದ್ವಿತೀಯ ಹಂತದ ಶ್ರಮದಾನ ಕಾರ್ಯಕ್ಕೆ ಚಾಲನೆ
0
ಜೂನ್ 26, 2019