ಮರುಗಿ ಮಾಡುವುದೇನು ಸಾಕಿ
ನ್ನಳಾಕೆಯೊಂದಿದೆ ತನಗೆ ರಘುವರ
ನರಸಿಕೊಳಲೀ ಗಿರಿಯ ಕಿತ್ತೊಯ್ದಿಳುಹುವೆನು ಮುಂದೆ
ತೆರನನಾತನೆ ನೋಡಿಕೊಳಲೆ
ಚ್ಚಳಕೆಗಿದು ತಾ ಸಮಯವಿನಿತಕೆ
ಕೊರತೆ ಬಾರದೆನುತ್ತ ನಿಶ್ಚಯಿಸಿದನು ನಿಜಮತವ||6||
ವನವಿದೊಂದಿದೆ ಗಗನದಗ್ರದ
ಧ್ವನಿಯಿದೊಂದಿದೆ ನೋಳ್ಪೆನುಪವ
ರ್ತನೆಯನಿಂದಿನಲೀ ಮಹಾವನದೊಳಗೆ ಬಳಿಕಲ್ಲಿ
ವನಜವದನೆಯ ಪಾದದರುಶನ
ವಿನಿತರಲಿ ಸಂಘಟಿಸದಿರೆ ಕಂ
ಡನುವ ಕಾಬೆನೆನುತ್ತಶೋಕಾವನಕೆ ಪುಟನೆಗೆದ ||16||
ಪುಟನೆಗೆದ ಭಾರದಲಿ ಕಪಿಪದ
ಚಟುಳಹತಿಗುಪ್ಪರಿಗೆ ಸಿಡಿಲಾ
ರ್ಭಟಿಸಿ ಹೊಡೆದದ್ರಿಯವೊಲಿಳೆಗೊ?ಗಿತು ನಿಹಾರದಲಿ
ಕಟಕ ಬೆದ??ತು ರಕ್ಕಸರ ಸಂ
ಘಟದ ಸೌರಂಭದಲಿ ಬಳಿಕೀ
ಪಟುಪರಾಕ್ರಮಿ ಹನುಮ ಹೊಕ್ಕನು ಲಲಿತನಂದನವ ||17||
ಆ ಮಹಾದ್ರುಮದಡಿಯ ಕದಳಿ
ಸ್ತೋಮ ಮಧ್ಯದ ದಳನಿಳಯದಲಿ
ರಾಮನಾಮಾಮೃತಸಜೀವತ್ರಾಣಧಾರಣದ
ತಾಮರಸದಳನಯನೆಯನು ನಿ
ಸ್ಸೀಮಸುವ್ರತಚರಿತೆಯನು ಸೀ
ತಾಮಹಾಲಕ್ಷ್ಮಿಯನು ಕಂಡನು ವೀರಹನುಮಂತ ||19||
ಶರಭ ಸಿಂಹ ಚಮೂರ ವದನದ
ಕರಿಲುಲಾಯ ವೃಕಾನನದ ಪರಿ
ಪರಿಯ ಖಗಮೃಗಸರ್ಪವಕ್ತ್ರದ ವಿಕೃತದೃಷ್ಟಿಗಳ
ಎರಡುನಾಲ್ಕೈದಾ??ತಲೆಗಳ
ಕರದ ಕತ್ತಿಯ ಕಾಳರಕ್ಕಸ
ತರುಣಿಯರ ಕಾವಲಿನ ಸೀತೆಯ ಕಂಡನಾ ಹನುಮ ||20||
ಮಂದಗಮನೆಯನಮಲತರಪೂ
ಣೇರ್ಂದುವದನೆಯ ಪೂರ್ವಹರಿಯರ
ವಿಂದಸದನೆಯ ಸಕಲಸುರಕುಲಶಕ್ತಿದೇವತೆಯ
ಇಂದು ಭಾಸ್ಕರ ಕಮಲಭವ ಸಂ
ಕ್ರಂದನಾದಿ ಸಮಸ್ತ ಸುರಮುನಿ
ವಂದಿತೆಯ ವರವಿಶ್ವಮಾತೆಯ ಕಂಡನಾ ಹನುಮ ||21||
ಏಕವೇಣೀಧರೆಯನಶ್ರುಜ
ಲಾಕುಳಾಯತಲೋಚನೆಯನು
ದ್ರೇಕಶೋಕಾನ್ವಿತೆಯನಂತಸ್ತಾಪವಿಹ್ವಲೆಯ
ಶೋಕನಿನದೆಯನಧಿಕಪುಣ್ಯ
ಶ್ಲೋಕಚರಿತೆಯ ಮಲಿನಪಟಪರಿ
ಧೀಕೃತೆಯನವಿರಳಕೃಶಾಂಗಿಯ ಕಂಡನಾ ಹನುಮ ||22||
ಆಗಬೇಕೀ ಜನನಿ ಜಾನಕಿ
ಮೈಗು??ಹು ತಪ್ಪದು ಮಹಾದೇ
ವೀಗ ಪಾತಿವ್ರತ್ಯಗುಣಗಣನಿಧಿಯ ಕಂಡೆನಲ
ಭಾಗಧೇಯರುನಾವಲಾ ನಮ
ಗಾಗು ಮುಂದಕೆ ಸುಲಭವೆಂದು ಸ
ರಾಗದಲಿ ಕೈಮುಗಿದು ಜಯಜಯ ಎಂದನಾ ಹನುಮ ||23||


