ಕಾಸರಗೋಡು: ಕಾಂಞÂಂ ಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾಸರಗೋಡಿನ ಕನ್ನಡ ಮಕ್ಕಳಿಗೆ ಭರತನಾಟ್ಯದ ಅರಿವು ಮೂಡಿಸುವ, ಗ್ರಹಿಸುವ, ಆಸಕ್ತಿ ಕುದುರಿಸುವ, ಮನೋಧರ್ಮಗಳನ್ನು ಅರಿಯುವ, ಮುದ್ರೆಗಳ ಜತೆ ಮಿಡಿಯುವ ಪ್ರಾಥಮಿಕ ತರಬೇತಿಯನ್ನು ನೀಡುವ ಅಭಿಯಾನವನ್ನು ರಂಗ ಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ, ಕಾಸರಗೋಡು ಚಿನ್ನಾ ಇವರ ನೇತೃತ್ವದಲ್ಲಿ `ಶಿಕ್ಷಣಕ್ಕಾಗಿ ನಾಟ್ಯ ತಕಜಣುತಾ' ಕಾರ್ಯಕ್ರಮ ಜರಗಿತು.
ಕಾರ್ಯಕ್ರಮವನ್ನು ಶಾಲಾ ವ್ಯವಸ್ಥಾಪಕರಾದ ವೇಣುಗೋಪಾಲ ನಂಬಿಯಾರ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷ ಪಲ್ಲವ ನಾರಾಯಣನ್ ಅವರು ನಾಟ್ಯಕ್ಕೆ ಭಾಷೆ ಇಲ್ಲ, ಎಲ್ಲಾ ಭಾಷಿಗರ ಹೃದಯ ಸ್ಪರ್ಷಿಸುವ ಕೆಲಸ ನಾಟ್ಯದಿಂದ ನಡೆಯುತ್ತದೆ ಎಂದರು. ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಬಳಿಕ ಮಂಜುಳಾ ಸುಬ್ರಹ್ಮಣ್ಯ ಹಾಗೂ ಭವ್ಯ ವಿದ್ಯಾರ್ಥಿಗಳಿಗೆ ನಾಟ್ಯದ ಮುದ್ರೆಗಳ ಪ್ರಾಥಮಿಕ ತರಬೇತಿಯನ್ನು ನೀಡಿದರು. ಶಾಲೆಯ ಅಧ್ಯಾಪಕರುಗಳು ಉಪಸ್ಥಿತರಿದ್ದರು. ಮುಖೋಪಾಧ್ಯಾಯರಾದ ಪ್ರದೀಪ್ ಕುಮಾರ್ ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ಅರವಿಂದ ಮಾಸ್ತರ್ ವಂದಿಸಿದರು.


