ಕಾಸರಗೋಡು: ಜುಲೈ 16 ರಂದು ಮಂಗಳವಾರ ಖಂಡಗ್ರಾಸ ಚಂದ್ರಗ್ರಹಣವು ಭಾರತದಾದ್ಯಂತ ಗೋಚರಿಸಲಿದೆ. ಉತ್ತರಾಷಾಡ ನಕ್ಷತ್ರ ಧನು ಮಕರ ರಾಶಿಗಳಲ್ಲಿ ಚಂದ್ರನಿಗೆ ಕೇತುಗ್ರಹಣ ಸಂಭವಿಸಲಿದೆ. ಧನು ರಾಶಿಯಲ್ಲಿ ರಾತ್ರಿ ಗಂಟೆ 1.31 ಕ್ಕೆ ಗ್ರಹಣಸ್ಪರ್ಶವಾಗಿ ಮಕರ ರಾಶಿಯಲ್ಲಿ ರಾತ್ರಿ ಗಂಟೆ 4.30 ಕ್ಕೆ ಗ್ರಹಣಮೋಕ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಲೋಕ ಕಲ್ಯಾಣಾರ್ಥ ಕೂಡ್ಲಿನ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜುಲೈ 16 ಮಂಗಳವಾರ ಶ್ರೀಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಗಳ ಆಶೀರ್ವಾದದೊಂದಿಗೆ ಕುಂಬಳೆ ವಾಸುದೇವ ಅಡಿಗರ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕ ಸುಬ್ರಾಯ ಕಾರಂತರ ಸಹಾಯದೊಂದಿಗೆ ಸಾಮೂಹಿಕ ಗ್ರಹಣಶಾಂತಿ ಹವನ ನಡೆಯಲಿದೆ. ಅಂದು ರಾತ್ರಿ 1.30 ಗಂಟೆಗೆ ಆರಂಭಗೊಳ್ಳವ ಹವನ ಪ್ರಾತಕಾಲ 4ಗಂಟೆಗೆ ಪೂರ್ಣಾಹುತಿಯಾಗಲಿದೆ. ಈ ಹವನದಲ್ಲಿ ಪಾಲ್ಗೊಳ್ಳಲಿಚ್ಚಿಸುವ ಭಕ್ತರು 50ಗ್ರಾಂ ಎಳ್ಳು ಮತ್ತು ಭಕ್ತಿಯಾನುಸಾರ ಎಳ್ಳೆಣ್ಣೆ ಹಾಗು 200 ರೂ ಸೇವಾಕಾಣಿಕೆ ಯೊಂದಿಗೆ ಅಂದು ರಾತ್ರಿ 1.30 ಗಂಟೆಗೆ ಶ್ರೀಕ್ಷೇತ್ರ ತಲುಪತಕ್ಕದ್ದು. ಸೇವಾರ್ಥಿಗಳು ಅಂದು ಅಕ್ಕಿಯಿಂದ ಮಾಡಿದ ಆಹಾರ ಸೇವಿಸಬಾರದು ಎಂದು ಕ್ಷೇತ್ರದಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶೇಷವನದಲ್ಲಿ ಗ್ರಹಣಶಾಂತಿ ಹವನ ಜುಲೈ 16 ರಂದು
0
ಜುಲೈ 08, 2019