ಪೆರ್ಲ:ಸ್ವರ್ಗದ ಅಟೋ ರಿಕ್ಷಾ ಚಾಲಕರು ಸ್ವರ್ಗ ಪೇಟೆ ಪರಿಸರವನ್ನು ಶನಿವಾರ ಮಧ್ಯಾಹ್ನ ಸ್ವಚ್ಛ ಗೊಳಿಸಿದರು.
ಅಟೋ ರಿಕ್ಷಾ ಚಾಲಕರಾದ ಶ್ರೀಧರ ಎಸ್., ಪ್ರಕಾಶ ಪಡ್ಪು, ರಾಧೇಶ ಪೊಯ್ಯೆ, ರಾಜೇಶ ದೇಶಮೂಲೆ, ರತೀಶ ವಾಣೀನಗರ, ಉದಯ ಚೆನ್ನುಮೂಲೆ, ರಾಧಾಕೃಷ್ಣ ಗೋಳಿಕಟ್ಟೆ, ಅಜಿತ್ ಪಡ್ಪು, ವಿಜಯ ದೇಲಂತರು, ಮನೋಜ್ ಪಾಲೆಪ್ಪಾಡಿ ನೇತೃತ್ವದಲ್ಲಿ ಪೇಟೆಯ ಕಸ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು.
ರಸ್ತೆ ಬದಿಯಲ್ಲಿ ಮಡುಗಟ್ಟಿ ನಿಂತಿದ್ದ ಕೆಸರು ಮಣ್ಣುಗಳನ್ನು ತೆರವು ಗೊಳಿಸಿ ಹೊಂಡಗಳಿಗೆ ಜಲ್ಲಿ ಹುಡಿ, ಮಣ್ಣು ತುಂಬಿಸಲಾಯಿತು.
ಮಳೆ ನೀರು ನೀರು ಸರಾಗವಾಗಿ ಹರಿಯುವಂತೆ ಚರಂಡಿ ವ್ಯವಸ್ಥೆ ಹಾಗೂ ರಸ್ತೆ ಬದಿ ಅಡಚಣೆಯಾಗಿದ್ದ ಮರದ ಗೆಲ್ಲುಗಳನ್ನು ತೆರವು ಗೊಳೀಸಲಾಯಿತು. ರಿಕ್ಷಾ ಚಾಲಕರ ಸ್ವಚ್ಚತಾ ಮನೋಭಾವಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.


