ಕುಂಬಳೆ: ಕುಂಬಳೆ ಪಂಚಾಯತಿ ಬಿಜೆಪಿ ಸಮಿತಿ ಸಮಾವೇಶವು ಕುಂಬಳೆಯಲ್ಲಿ ಇತ್ತೀಚೆಗೆ ಜರಗಿತು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಪಿ. ಸುರೇಶ್ ಕುಮಾರ್ ಶೆಟ್ಟಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ದ್ವಿತೀಯ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಧಿಕಾರಕ್ಕೇರಿರುವ ಎನ್. ಡಿ.ಎ. ಸರಕಾರ ಮುಂದಿನ ದಿನಗಳಲ್ಲಿ ಕೃಷಿಕರ ಸಹಿತ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಲಿರುವುದಾಗಿ ಹೇಳಿದರು. ಪಕ್ಷದ ಸದಸ್ಯತನ ಅಭಿಯಾನದಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕರೆನೀಡಿದರು.
ಕುಂಬಳೆ ಪಂಚಾಯತಿ ಬಿಜೆಪಿ ಸಮಿತಿ ಅಧ್ಯಕ್ಷ ಕೆ. ಶಂಕರ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಉಪಾಧ್ಯಕ್ಷ ಕೆ. ವಿನೋದನ್, ಯುವಮೋರ್ಚಾ ಮಂಡಲಾಧ್ಯಕ್ಷ ಚಂದ್ರಕಾಂತ ಶೆಟ್ಟಿ, ನಾಯಕರಾದ ರಾಧಾಕೃಷ್ಣ ರೈ ಮಡ್ವ,ಬಾಬು ಗಟ್ಟಿ, ಕಮಲಾಕ್ಷ ಆರಿಕ್ಕಾಡಿ, ಶಶಿ ಕುಂಬಳೆ, ಮಧುಸೂದನ್, ಕೆ. ರಮೇಶ್ ಭಟ್, ಮುರಳೀಧರ ಯಾದವ್, ಮಣಿಕಂಠ ರೈ, ರಾಮಚಂದ್ರ ಕೋಟೆಕ್ಕಾರು, ಹರೀಶ್ ಗಟ್ಟಿ, ಸುಜಿತ್ ರೈ, ಪುಷ್ಪಲತಾ ಉಪಸ್ಥಿತರಿದ್ದು ಮಾತನಾಡಿದರು.
ಸಭೆಯಲ್ಲಿ ಕುಂಬಳೆ ಸೇವಾ ಸಹಕಾರಿ ಬ್ಯಾಂಕಿನ ಸರಕಾರಿ ನೇಮಿತ ಆಡಳಿತ ಸಮಿತಿ ಸಹಕಾರಿ ಅಧಿಕಾರಿ ಮತ್ತು ಕೆಲವು ಎಡರಂಗ ಐಕ್ಯರಂಗಗಳ ನಾಯಕರು ಶಾಮೀಲಾಗಿ ಚುನಾವಣೆಯಲ್ಲಿ ಅಧಿಕಾರಕ್ಕಾಗಿ ಕಾನೂನು ಬಾಹಿರವಾಗಿ ಸದಸ್ಯತನ ಸ್ವೀಕರಿಸಿದ ಕೃತ್ಯವನ್ನು ಖಂಡಿಸಲಾಯಿತು. ಕೆ. ಸುಧಾಕರ ಕಾಮತ್ ಸ್ವಾಗತಿಸಿ,ಸರೇಶ್ ಶಾಂತಿಪ್ಪಳ್ಳ ವಂದಿಸಿದರು.


