ಬದಿಯಡ್ಕ: ನೀರ್ಚಾಲಿನ ಶ್ರೀವಿಘ್ನೇಶ್ವರ ಯಕ್ಷಗಾನ ಕಲಾಸಂಘದ ನೇತೃತ್ವದಲ್ಲಿ ಮಳೆಗಾಲದ ಮಹೋನ್ನತ ಯಕ್ಷಗಾನ ತಾಳಮದ್ದಳೆಯು ಜು.28 ರಂದು ಭಾನುವಾರ ಅಪರಾಹ್ನ 2 ರಿಂದ ನೀರ್ಚಾಲು ಮಹಾಜನ ಶಾಲಾ ವಠಾರದಲ್ಲಿ ನಡೆಯಲಿದೆ.
ಶಲ್ಯ ಸಾರಥ್ಯ-ನಿರ್ಗಮನ ಪ್ರಸಂಗ ಆಖ್ಯಾನದ ತಾಳಮದ್ದಳೆ ಕೂಟವನ್ನು ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ದೀಪ ಬೆಳಗಿಸಿ ಉದ್ಘಾಟಿಸುವರು. ಬಳಿಕ ನಡೆಯುವ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಚೆಂಡೆ-ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಅಡೂರು ಲಕ್ಷ್ಮೀನಾರಾಯಣ ರಾವ್ ಭಾಗವಹಿಸುವರು. ಮುಮ್ಮೇಳದಲ್ಲಿ ಶಂಭು ಶರ್ಮ ವಿಟ್ಲ, ರಾಧಾಕೃಷ್ಣ ಕಲ್ಚಾರ್, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಪಕಳಕುಂಜ ಶ್ಯಾಂ ಭಟ್, ಹರೀಶ ಬಳಂತಿಮೊಗರು, ಬಾಲಕೃಷ್ಣ ಆಚಾರ್ಯ ನೀರ್ಚಾಲು ವಿವಿಧ ಪಾತ್ರಗಳನ್ನು ನಿರ್ವಹಿಸುವರು.

