ಕುಂಬಳೆ: ಕುಂಬಳೆ ಮೆಡಿಸಿಟಿ ಹೆಲ್ತ್ ಕೇರ್ ಸೆಂಟರ್ ಮತ್ತು ಆಶ್ರಯ ಟ್ರಸ್ಟ್ ಕುಂಬಳೆ ಇವರ ಜಂಟಿ ಆಶ್ರಯದಲ್ಲಿ ಉಚಿತ ಎಲ್ಲಾ ರೋಗ ನಿರ್ಣಯ ವೈದ್ಯಕೀಯ ಶಿಬಿರ ಜು.21 ರಂದು ಭಾನುವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2ರ ವರೆಗೆ ಕುಂಬಳೆ ಕಣಿಪುರ ರಸ್ತೆಯಲ್ಲಿರುವ ಮೆಡಿಸಿಟಿ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ.
ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಳ್ಳುವ ಮೊದಲ ನೂರು ಮಂದಿಗೆ ಆರೋಗ್ಯ ಕಾರ್ಡ್ ವಿತರಣೆ ನಡೆಯಲಿದೆ. ಶಿಬಿರದಲ್ಲಿ ಡಾ.ಮೊಹಮ್ಮದ್ ಸಾದಿಕ್, ಡಾ.ಸಂತೋಷ್ ಆರ್.ಜಿ, ಡಾ.ಸಿತಾರಾ.ಸಿ.ಎಸ್., ಡಾ.ಮೊಹಮ್ಮದ್ ನಪ್ಸೀರ್ ವಿವಿಧ ಪರಿಶೀಲನೆಗಳನ್ನು ನಡೆಸಿ ಚಿಕಿತ್ಸೆಗೆ ನಿರ್ದೇಶನ ನೀಡುವರು.

