ಕುಂಬಳೆ: ಬಂದ್ಯೋಡು ಸಮೀಪದ ಅಡ್ಕದಲ್ಲಿ ಕಾರ್ಯಾಚರಿಸುತ್ತಿರುವ ವಿಶೇಷ ಚೇತನರ ಜಿಲ್ಲೆಯ ಏಕೈಕ ಸ್ವಸಹಾಯ ಸಂಘವಾದ ಹ್ಯಾಂಡಿಕ್ರೋಪ್ಸ್ ಸ್ವಸಹಾಯ ಸಂಘದ ಎರಡನೇ ವಾರ್ಷಿಕೋತ್ಸವವು ಜು.20 ರಂದು ಶನಿವಾರ ಅಡ್ಕ ಮುಖ್ಯ ಪೇಟೆಯಲ್ಲಿ ಬೆಳಿಗ್ಗೆ 11 ರಿಂದ ನಡೆಯಲಿದೆ ಎಂದು ಸಂಬಂಧಪಟ್ಟವರು ಬುಧವಾರ ಕುಂಬಳೆಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ನಡೆಯುವ ಸಭಾ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಉದ್ಘಾಟಿಸುವರು. ಮಂಗಲ್ಪಾಡಿ ಗ್ರಾ.ಪಂ. ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಅಧ್ಯಕ್ಷತೆ ವಹಿಸುವರು. ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್, ಮಂಗಲ್ಪಾಡಿ ಆರೋಗ್ಯ ಪರಿವೀಕ್ಷಕ ಸುರೇಶ್ ಕುಮಾರ್ ವಿ.ವಿ., ಗ್ರಾ.ಪಂ.ಸದಸ್ಯೆ ಅನಿತಾ ಬಿ., ಯೂಸುಫ್ ಸಿ.ಎ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಹ್ಯಾಂಡಿಕ್ರೋಪ್ಸ್ ಸ್ವಸಹಾಯ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಉದ್ಯಾವರ ಉಪಸ್ಥಿತರಿರುವರು.
ಸಮಾರಂಭದಲ್ಲಿ ಯಾಕೋ ಫ್ಯಾಕ್ಸ್ ಪೇಪರ್ ಕ್ಯಾರಿ ಬ್ಯಾಗ್ ಮತ್ತು ಬಟ್ಟೆ ಕೈಚೀಲ, ಸೀಡ್ ಪೆನ್ ಉತ್ಪಾದನಾ ಘಟಕಗಳನ್ನು ಉದ್ಘಾಟಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಎರಡನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಚೇತನರಿಗೆ ಉದ್ಯೋಗ ತರಬೇತಿ ಶಿಬಿರ ಆ.5ರ ವರೆಗೆ ಆಯೋಜಿಸಲಾಗಿದೆ. ಆ.5 ರಂದು ಅಪರಾಹ್ನ 2 ರಿಂದ ನಡೆಯಲಿರುವ ಸಮಾರೋಪ ಸಮಾರಂಭವನ್ನು ಜಿಲ್ಲಾ ಪಂಚಾಯತಿ ಸದಸ್ಯೆ ಫರೀದಾ ಝಕೀರ್ ಉದ್ಘಾಟಿಸುವರು. ವಿಇಧ ವಲಯಗಳ ಗಣ್ಯರು ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಸ್ವಸಹಾಯ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಉದ್ಯಾವರ, ಕಾರ್ಯದರ್ಶಿ ಹದೀಪ್ ಮೌಲವಿ ಅಡ್ಕ, ಸದಸ್ಯರುಗಳಾದ ಸಿದ್ದೀಕ್ ಪಾಚೇನಿ, ಇಬ್ರಾಹಿಂ ಅಡ್ಕ, ಅಂದು ಬೇಕೂರು, ಮೊಯ್ದೀನ್ ರೀಯಾಸ್ ಪಾಚೇನಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.


