HEALTH TIPS

ನೀರ್ಚಾಲು ಮದಕ : ಜಲ ಮರುಪೂರಣ ಸಹಸ್ರ ಸರೋವರ ಯೋಜನೆ ಕಾಮಗಾರಿಗೆ ಚಾಲನೆ

     
      ಬದಿಯಡ್ಕ: ಶತಮಾನದ ಇತಿಹಾಸವಿರುವ ನೀರ್ಚಾಲು ಮದಕವನ್ನು ಅಭಿವೃದ್ಧಿಪಡಿಸಿ ಜಲಮರುಪೂರಣಗೈಯ್ಯುವ ಕಾಮಗಾರಿ ಬುಧವಾರ ಆರಂಭಗೊಂಡಿತು. 2016 ಜ.1 ರಂದು ಸಿ.ಪಿ.ಸಿ.ಆರ್.ಐ. ನಿರ್ದೇಶಕರಾಗಿದ್ದ ಡಾ.ಪಿ.ಚೌಡಪ್ಪ ಹಾಗು ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅವರ ಉಪಸ್ಥಿತಿಯಲ್ಲಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಮದಕದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು.
      ಶಿಲಾನ್ಯಾಸ ಕಾರ್ಯವನ್ನು ಬಹಿಷ್ಕರಿಸುವ ಮೂಲಕ ಕೆಲವು ಸ್ಥಾಪಿತ ಹಿತಾಸಕ್ತಿಗಳ ಹಲವಾರು ಸಮಸ್ಯೆಗಳಿಂದ ಬಳಿಕ ನಿರ್ಮಾಣದ ಕೆಲಸಗಳು ಸ್ಥಗಿತಗೊಳ್ಳುವಂತಾಯಿತು. ಸರ್ಕಾರದ ಕಂದಾಯ ಇಲಾಖೆ, ಭೂಗರ್ಭ ಇಲಾಖೆ, ಕೇರಳ ಭೂ ಅಭಿವೃದ್ಧಿ ನಿಗಮ, ಮಣ್ಣು ಜಲ ಸಂರಕ್ಷಣಾ ಇಲಾಖೆ, ಜಲಶಕ್ತಿ ಅಭಿಯಾನ ಇಲಾಖೆ, ನಬಾರ್ಡ್, ಸಣ್ಣ ನೀರಾವರಿ ಇಲಾಖೆ, ಬದಿಯಡ್ಕ ಗ್ರಾಮ ಪಂಚಾಯತಿ ಮತ್ತು ವಿವಿಧ ಇಲಾಖಾ ಮಟ್ಟದಲ್ಲಿ ಯೋಜನೆಯ ಸತ್ಯಾವಸ್ಥೆಯ ಅವಲೋಕನದ ಬಳಿಕ ಜಲಸಂರಕ್ಷಣೆಗೆ ಆದ್ಯತೆ ನೀಡಿ ಜಿಲ್ಲಾಧಿಕಾರಿಯವರು ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡು ಮತ್ತೆ ಕಾಮಗಾರಿ ಪುನರಾರಂಭಕ್ಕೆ ಯೋಜನೆ ಸಿದ್ದಪಡಿಸಿದರು. ಕೃಷಿ ಹಾಗು ಕುಡಿಯುವ ನೀರು ಲಭ್ಯತೆಗೆ ಈ ಮದಕವನ್ನು ಅಭಿವೃದ್ಧಿ ಪಡಿಸುವುದು ಶಾಶ್ವತ ಜಲ ಕ್ಷಾಮಕ್ಕೆ ಪರಿಹಾರ ಸಿಗಬಹುದಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು.
     2011 ರಿಂದ ಕೃಷಿ ಇಲಾಖೆ, ಗ್ರಾಮ ಕಚೇರಿ, ತಾಲೂಕು, ಜಿಲ್ಲಾಧಿಕಾರಿ, ಕಂದಾಯ ಉಪಜಿಲ್ಲಾಧಿಕಾರಿ ಕಾರ್ಯಾಲಯಗಳ ಕಡತಗಳ ಸೂಕ್ಷ್ಮ ಪರಿಶೋಧನೆಗಳಿಗೆ ಒಳಪಟ್ಟು ನಬಾರ್ಡ್ ಆರ್.ಐ.ಡಿ.ಎಫ್.ನ  ಸಹಸ್ರ ಸರೋವರ ಯೋಜನೆಯನ್ನು ಹಿಂದಿನ ಸರ್ಕಾರದ ಕೃಷಿ ಸಚಿವ ಕೆ.ಪಿ.ಮೋಹನನ್ ಅವರು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಯೋಜನೆಗೆ ಅಂಗೀಕಾರವನ್ನು ನೀಡಿದ್ದರು. ಅನುದಾನವಾಗಿ 94 ಲಕ್ಷ ರೂಪಾಯಿ ಮಂಜೂರಾತಿ ನೀಡಿದ್ದರು.
    ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಕಳೆದ 8 ವರ್ಷಗಳಿಂದ ನಿರಂತರ ಶ್ರಮಿಸುವಲ್ಲಿ ನೀರ್ಚಾಲು ಮದಕ ಅಭಿವೃದ್ಧಿ ಸಮಿತಿಯ ಸಂಚಾಲಕ ಎಂ.ಎಚ್.ಜನಾರ್ದನ ಅವರು ಪ್ರಮುಖ ಪಾತ್ರವಹಿಸಿದ್ದರು.
     ಮದಕವನ್ನು 156 ಮೀ. ಉದ್ದ, 20 ಮೀ. ಅಗಲ, 5 ಮೀ. ಆಳಗೊಳಿಸಿ ದಕ್ಷಿಣ ಭಾಗದಲ್ಲಿ ಯಥೇಷ್ಟ ಸ್ಥಳ ಉಳಿಸಿಕೊಂಡು ಪಶ್ಚಿಮದಲ್ಲಿ 10 ಅಡಿ ಕಾಲುದಾರಿ ಪೂರ್ವಕ್ಕೆ 5 ಮೀ. ಸ್ಥಳಾವಕಾಶದೊಂದಿಗೆ ಕೆರೆಯ ಸುತ್ತು ಒಂದೂವರೆ ಮೀಟರ್ ಎತ್ತರದ ತಡೆಗೋಡೆ ನಿರ್ಮಾಣವಾಗಲಿದೆ. ಇದರೊಂದಿಗೆ ನೀರಿನ ಸ್ವಚ್ಛತೆಗೆ ರೀಚಾರ್ಜ್ ಪಿಟ್ ನಿರ್ಮಾಣಗೊಳ್ಳಲಿದೆ.
    ಕೆರೆಯ ಪಾಶ್ರ್ವದಲ್ಲಿ ಉಳಿಕೆಯಿರುವ ಸ್ಥಳದಲ್ಲಿ ಔಷಧೀಯ ಹಾಗು ಹೂವಿನ ತೋಟ ನಿರ್ಮಿಸುವ ಯೋಜನೆಯು ಕಾರ್ಯಗತಗೊಳ್ಳಲಿದೆ. ಪ್ರದೇಶಕ್ಕೆ ಅತ್ಯಂತ ಅವಶ್ಯಕತೆಯಾಗಿರುವ ಬದಿಯಡ್ಕ, ನೀರ್ಚಾಲು ಅಗ್ನಿ ಶಾಮಕ ರಕ್ಷಾ ಕೇಂದ್ರವು ಈ ಮದಕದ ಸಮೀಪವೇ ನಿರ್ಮಾಣಗೊಳ್ಳಲಿರುವುದು ಒಂದು ವೈಶಿಷ್ಟ್ಯವಾಗಿದೆ. ಆಗ್ನಿ ಶಾಮಕ ಕೇಂದ್ರ ಹಾಗೂ ನೀರು ಒಂದೆಡೆಯೇ ಸಂಗಮಿಸುವುದು ಈ ಊರಿನ ಜನರ ಭಾಗ್ಯವಾಗಲಿದೆ. ಜೊತೆಗೆ ಈಗಾಗಲೇ ಬದಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಬೇಳ ಗ್ರಾಮದಲ್ಲಿ ಕುಮಾರಮಂಗಲದಲ್ಲಿರುವ ಕಾಸರಗೋಡು ಗಿಡ್ಡ ಹಸುವಿನ ತಳಿ ಸಂರಕ್ಷಣಾ ಕೇಂದ್ರ, ಇದೀಗ ನಿರ್ಮಾಣಗೊಳ್ಳುತತಿರುವ ನೀರ್ಚಾಉ ಮದಕ ಮತ್ತು ಶೀಘ್ರ ಸ್ಥಾಪನೆಗೊಳ್ಳಲಿರುವ ಅಗ್ನಿ ಶಾಮಕ ಕೇಂದ್ರ, ಈ ಮೂರೂ ಒಂದೇ ಗ್ರಾಮದಲ್ಲಿ ಅಸ್ತಿತ್ವಹೊಂದುವ ಮೂಲಕ ಇತರೆಡೆಗಳಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳಲಿದೆ.
     ಅಭಿಮತ:
     ನೀರ್ಚಾಲು ಮದಕದ ಪುನರ್ ನಿರ್ಮಾಣದ ದಶಕಗಳ ಕನಸು ಇದೀಗ ಈಡೇರುತ್ತಿರುವುದು ಸಂತಸ ತಂದಿದೆ. ಸ್ಥಳೀಯರು ಇದರ ಮಹತ್ವವನ್ನು ಅಥ್ರ್ಯಸಿ ಸಹಕರಿಸುವ ಅಗತ್ಯವಿದೆ. ಜಲಕ್ಷಾಮದ ಭಯಾನಕತೆಯನ್ನು, ಮುಂದಿನ ತಲೆಮಾರಿಗೆ ಜಲ ಅವಕಾಶವನ್ನು ಮಾಡಿ ಕೊಡುವ ಮೂಲಕ ಬದುಕಿನ ಮಹತ್ವದ ಸಾಧನೆಮಾಡಿದಂತಾಗುತ್ತದೆ.
                              ಎಂ.ಎಚ್.ಜನಾರ್ದನ
                        ಬದಿಯಡ್ಕ ಗ್ರಾ.ಪಂ.ಕೃಷಿ ಅಭಿವೃದ್ದಿ ಸಮಿತಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries