ಕರಚತುಷ್ಟಯದುದಿತಮದ ಸಿಂ
ಧುರದನಿಭಾನನದಮಲಲಂಬೋ
ದರದ ವರಸಿಂಧೂರಚಂದನಗಂಧಬಂಧುರದ
ಉರುಲಲಾಟದಿ ನರ್ತಿಸುವ ಕಚ
ಭರದ ಕಮನೀಯಪ್ರಭಾವಿ
ಸ್ತರವಿನಾಯಕ ಮಾಡೆಮಗೆ ನಿರ್ವಿಘ್ನದಾಯಕವ||6||
ಚಾರುತರ ಕರಣಾಟಕದ ವಿ
ಸ್ತಾರರಾಮಾಯಣಕೆ ಕರ್ತೃ ಕು
ಮಾರವಾಲ್ಮೀಕಿಯೆ ಕಥಾಪತಿ ತೊರವೆಯಧಿನಾಥ
ವೀರನರಹರಿಯೆನಲು ಮೆಚ್ಚದ
ರಾರು ಸತ್ಕವಿತಾವಿಲಾಸದ
ಸೂರಿಗಳ ಹೃದಯಾಕರುಷಣ ಕಥಾಕುತೂಹಲವ ||9||
ಮುಂದುವರಿಯುವುದು......
ಧರೆಯೊಳಗ್ಗದ ರಾಘವೇಂದ್ರನ
ಚರಿತಶತಕೋಟಿಪ್ರವಿಸ್ತರ
ವರಮಹಾಚಾರಿತ್ರರಚನಾಸುಪ್ರಬಂಧದಲಿ
ಪರಮಭಕ್ತಿಯೊಳಾವನೊಂದ
ಕ್ಷರವ ಕೇಳ್ದ ನರಂಗೆ ಪಾತಕ
ಹರೆವುದೆಂದು ಕುಮಾರರಿಗೆ ವಾಲ್ಮೀಕಿಮುನಿ ನುಡಿದ ||13||
ಕುಮಾರರಿಗೆ= ಲವಕುಶರಿಗೆ
ಸುಂದರಕಾಂಡ
ಮೂರನೆಯ ಸಂಧಿ
ಸೂಚನೆ: ಕ್ಷೋಣಿಪತಿ ಸಿರಿರಾಘವೇಂದ್ರನ
ರಾಣಿಯನು ಬನದೊಳಗೆ ಭುವನ
ಪ್ರಾಣಸುತ ಕಂಡಿತ್ತನನುಪಮರಾಜಮುದ್ರಿಕೆಯ
ಕಂದ ಕೇಳೈ ಕುಶನೆ ಚಿಂತೆಯ
ಸಂದಣಿಯ ಸುಯ್ಲುಗಳ ಸೊಂಪು
ಕಂದಿದಾನನದಿಳಿವ ಜಲಬಿಂದುಗಳ ಲೋಚನದ
ನಿಂದಿರುತ ಬೆ?ಗಾಗುತವನೀ
ನಂದನೆಯದೇನಾದಳೋ ಹಾ
ಯೆಂದೆನುತ ಹಂಬಲಿಸಿ ಹಲುಬುತ ಹನುಮನೈತಂದ ||1||
ರಣಲಾಘವದಿಂದ ಮೆಲ್ಲನೆ
ತಿರುತಿರುಗಿ ನೋಡಿದನು ತತ್ಪುರ
ವರವನಾ ಚಂದ್ರಮನ ಸಾಂದ್ರಪ್ರಭೆಯ ಬೆಳಗಿನಲಿ
ಮೈದುದಿಲ್ಲನಿತು ದೇವಿಯ
ರಿರವು ತನ್ನಯ ಕಂಗಳಿಗೆ ಗೋ
ಚರಿಸುವುದು ದುರ್ಲಭವೆನುತ ದುಮ್ಮಾನಮನನಾದ ||5||


