ಮಂಜೇಶ್ವರ: ಕೊಡ್ಲಮೊಗರು ಶ್ರೀ ವಾಣೀವಿಜಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಇತ್ತೀಚೆಗೆ ಜರಗಿತು. ಸಂಘದ ಅಧ್ಯಕ್ಷ ಇಸ್ಮಾಯಿಲ್ ಕಾಂತಮಜಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಸರಳ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಸರಿತಾ 2018-19ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು.
ವರ್ಕಾಡಿ ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ ಪಜ್ವ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಬಿಆರ್‍ಸಿ ತರಬೇತುದಾರ ಗುರು ಪ್ರಸಾದ್ ರಕ್ಷಕರ ಜವಾಬ್ದಾರಿಗಳನ್ನು ತಿಳಿಸಿದರು. ಶಾಲಾ ಪ್ರಬಂಧಕಿ ಅನಸೂಯ ದೇವಿ ಶಾಲೆಯಲ್ಲಿ ಮಕ್ಕಳಿಗಾಗಿ ಇನ್ನಷ್ಟು ಸೌಕರ್ಯಗಳನ್ನು ಒದಗಿಸಿ ಕೊಡುವ ಭರವಸೆಯೊಂದಿಗೆ ಶುಭಹಾರೈಸಿದರು.
ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಇಸ್ಮಾಯಿಲ್ ಕಾಂತಮಜಲು ಅವರು ಅವಿರೋಧವಾಗಿ ಮರು ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಮೊಹಮ್ಮದ್ ಶರೀಫ್ ಮತ್ತು ಮಾತೃ ಮಂಡಳಿಯ ಅಧ್ಯಕ್ಷೆಯಾಗಿ ಪ್ರೇಮಲತಾ, ಉಪಾಧ್ಯಕ್ಷೆಯಾಗಿ ಸೇಕಿನಾ ಅವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿಗೆ ರಕ್ಷಕರನ್ನು ಆಯ್ಕೆಮಾಡಲಾಯಿತು. ಶಿಕ್ಷಕಿ ಜ್ಯೋತಿಲಕ್ಷ್ಮೀ ವಂದಿಸಿದರು. ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.


