ಮಂಜೇಶ್ವರ: ಆನೆಕಲ್ಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಇತ್ತೀಚೆಗೆ ನಡೆಯಿತು. ಸಂಘದ ಅಧ್ಯಕ್ಷ ಸತ್ಯನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ಶಾಲಾ ಪ್ರಬಂಧಕ ಪ್ರತಿನಿಧಿ ಹಿಂದಿ ಅಧ್ಯಾಪಕ ಮುರಳಿ ಶ್ಯಾಮ ಉದ್ಘಾಟಿಸಿದರು. ಸಂಘದ ಕಾರ್ಯದರ್ಶಿ ಪ್ರಧಾನ ಅಧ್ಯಾಪಿಕೆ ರೇಣುಕಾ ವಿ. ಸ್ವಾಗತಿಸಿ, ಕಳೆದ ಸಾಲಿನ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.
ಅಧ್ಯಾಪಕರ ಸಂಘದ ಕಾರ್ಯದರ್ಶಿ ರವಿಶಂಕರ್ 2019- 20 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಪದಾಧಿಕಾರಿಗಳನ್ನು ಆರಿಸಲು ನೇತೃತ್ವ ನೀಡಿದರು. ಅಶ್ರಫ್ ಎ.ಎಂ. ಅಧ್ಯಕ್ಷರು, ಉಮ್ಮರ್ ಫಾರೂಕ್ ಉಪಾಧ್ಯಕ್ಷರು, ಲೀಲಾವತಿ ಮಾತೃ ಸಂಘದ ಅಧ್ಯಕ್ಷೆ, ಸೀತಾ ಆನೆಕಲ್ಲು ಮಾತೃ ಸಂಘದ ಉಪಾಧ್ಯಕ್ಷರಾಗಿ ಆರಿಸಲ್ಪಟ್ಟರು. ರಕ್ಷಕರು ಮತ್ತು ಅಧ್ಯಾಪಕರು ಪರಸ್ಪರ ಶಾಲಾಭಿವೃದ್ಧಿ ಸಂಬಂಧಿಸಿದ ವಿಚಾರಗಳ ಬಗ್ಗೆ ಆರೋಗ್ಯಪೂರ್ಣ ಚರ್ಚೆಯು ನಡೆಯಿತು.
2018 19 ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಭಟ್ ಮಾತನಾಡಿದರು. ವರ್ಕಾಡಿ ಗ್ರಾಮ ಪಂಚಾಯತಿ ಸೊಡಂಕೂರು ವಾರ್ಡ್ ಸದಸ್ಯೆ ಸೀತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನೂತನವಾಗಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಅಶ್ರಫ್ ಎ.ಎಂ. ಅವರು ಮುಂದಿನ ಕಾರ್ಯಯೋಜನೆಯ ಬಗ್ಗೆ ಮಾತನಾಡಿ ಶುಭಹಾರೈಸಿದರು. ಅಧ್ಯಾಪಕ ಜೀವನ್ ಕುಮಾರ್ ವಂದಿಸಿದರು. ನಾರಾಯಣ ರಾಜ್ ಟಿ.ಎಸ್. ಕಾರ್ಯಕ್ರಮ ನಿರೂಪಿಸಿದರು.


