ಬದಿಯಡ್ಕ: ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಭಾನುವಾರ ರಾಮಾಯಣ ವಾಚನ ಹಾಗೂ ಪ್ರವಚನ ಕಾರ್ಯಕ್ರಮ ಜರಗಿತು.
ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಕೆದಿಲಾಯ ದೀಪ ಬೆಳಗಿಸಿ ಚಾಲನೆಯನ್ನು ನೀಡಿದರು. ಪ್ರಖ್ಯಾತ ಯಕ್ಷಗಾನ ಕಲಾವಿದರುಗಳಾದ ಸತೀಶ್ ಪುಣಿಚಿತ್ತಾಯ ಪೆರ್ಲ ವಾಚನದಲ್ಲಿ ಹಾಗೂ ನಾರಾಯಣ ಮೂಲಡ್ಕ ಪ್ರವಚನದಲ್ಲಿ ರಾಮಾಯಣ ಕಥಾಭಾಗವನ್ನು ಪ್ರಸ್ತುತಪಡಿಸಿದರು. ಕರ್ಕಟಕ ಮಾಸ(ಆಟಿ)ದಲ್ಲಿ ಪ್ರತೀ ಭಾನುವಾರ ಬೆಳಿಗ್ಗೆ 10ರಿಂದ 12ರ ತನಕ ರಾಮಾಯಣ ಪ್ರವಚನ ಕಾರ್ಯಕ್ರಮ ಜರಗಲಿರುವುದು. ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ತಿಳಿಸಿರುತ್ತಾರೆ.


