HEALTH TIPS

ಚಂದ್ರಯಾನ-2:ಇಸ್ರೋ ಯಶಸ್ಸಿನ ಬಗ್ಗೆ ನಾಸಾ ಹೇಳಿದ್ದೇನು!

 
        ವಾಶಿಂಗ್ಟನ್: ಚಂದ್ರಯಾನ-2 ಉಡಾವಣೆ ಯಶಸ್ವಿಯಾಗಿದ್ದು, ಇಸ್ರೋ ಮೈಲಿಗಲ್ಲಿಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಅಭಿನಂದನೆಗಳನ್ನು ತಿಳಿಸಿದೆ. ಚಂದ್ರನ ದಕ್ಷಿಣ ಧ್ರುವದ ಬಗ್ಗೆ ಭಾರತ ಏನನ್ನು ಅರಿತುಕೊಳ್ಳಲಿದೆ ಎಂಬುದನ್ನು ತಿಳಿಯಲು ನಾಸಾ ಕಾತುರವಾಗಿರುವುದಾಗಿ ನಾಸಾ ಹೇಳಿದೆ.
    "ಚಂದ್ರಯಾನ-2 ರ ಯಶಸ್ಸಿಗಾಗಿ ಇಸ್ರೋಗೆ ಅಭಿನಂದನೆಗಳು, ಇಸ್ರೋ ಮಿಷನ್ ನ್ನು ಬೆಂಬಲಿಸುವುದು ನಮಗೆ ಹೆಮ್ಮೆಯ ವಿಷಯ. ಚಂದ್ರನ ದಕ್ಷಿಣ ಧ್ರುವದ ಬಗ್ಗೆ ಭಾರತ ಏನನ್ನು ಅರಿತುಕೊಳ್ಳಲಿದೆ ಎಂಬುದನ್ನು ನಾವು ಎದುರು ನೋಡುತ್ತಿದ್ದೇವೆ, ಕೆಲವೇ ವರ್ಷಗಳಲ್ಲಿ ನಾವೂ ಸಹ ಚಂದ್ರನ ದಕ್ಷಿಣ ಧ್ರುವಕ್ಕೆ ಗಗನಯಾತ್ರಿಗಳನ್ನು ಕಳಿಸಲಿದ್ದೇವೆ ಎಂದು ನಾಸಾ ಟ್ವೀಟ್ ಮಾಡಿದೆ.
   
Congrats to @ISRO on the launch of Chandrayaan 2, a mission to study the Moon. We're proud to support your mission comms using our Deep Space Network and look forward to what you learn about the lunar South pole where we will send astronauts on our mission in a few years
View image on Twitter
   ಮೊದಲ ಬಾರಿಗೆ ಚಂದ್ರನ ಮೇಲ್ಮೈ ಯಲ್ಲಿ ಗಗನಯಾತ್ರಿಗಳನ್ನು ಇಳಿಸಿದ ನಾಸಾದ ಯಶಸ್ಸಿಗೆ  ಜು.20 ಕ್ಕೆ  50 ವರ್ಷಗಳಾಗಿವೆ. ಈಗ ಚಂದ್ರನ ದಕ್ಷಿಣ ಧ್ರುವಕ್ಕೆ ಗಗನಯಾತ್ರಿಗಳನ್ನು ಕಳಿಸುವ ತಯಾರಿಯಲ್ಲಿದೆ ನಾಸಾ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries