ಕುಂಬಳೆ: ಕವಯತ್ರಿ ಶಿಕ್ಷಕಿ ಕುಂಬಳೆಯ ಪರಿಣಿತ ರವಿ ಅವರ ಭಾವಬಿಂದು ಎಂಬ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ ಜುಲೈ 6ಕ್ಕೆ ಸಂಜೆ 6.30 ಕ್ಕೆ ಕೊಚ್ಚಿಯಲ್ಲಿ ಕನ್ನಡ ಸಂಘದ ಆಶ್ರಯದಲ್ಲಿ ಜರಗಲಿದೆ.
ಕುಂಬಳೆಯ ಸಿಂಪರ ಪ್ರಕಾಶನದ ವತಿಯಿಂದ ಪ್ರಕಟಿಸಿದ ಮೂರನೇಯ ಕೃತಿ ಇದಾಗಿದ್ದು ಕೊಚ್ಚಿ ಕನ್ನಡ ಸಂಘ ಮಾಜಿ ಅಧ್ಯಕ್ಷ ಕೆ. ಎನ್. ಸೂರ್ಯನಾರಾಯಣ ರಾವ್ ಕೃತಿ ಬಿಡುಗಡೆಗೊಳಿಸುವರು. ಹಿರಿಯ ಉದ್ಯಮಿ ರಾಮಚಂದ್ರನ್ ಅಧ್ಯಕ್ಷತೆ ವಹಿಸುವರು. ಕೊಚ್ಚಿ ಭಾರತೀಯ ವಿದ್ಯಾಭವನ್ ನ ಶಿಕ್ಷಕಿ ವಿದ್ಯಾ ರವಿಶಂಕರ್ ಕೃತಿ ಪರಿಚಯ ನಡೆಸುವರು. ಉದ್ಯಮಿ ಶಿವನಾಥ್ ಕೌಡಿ ಮೊದಲ ಪ್ರತಿ ಸ್ವೀಕಾರ ನಡೆಸಲಿದ್ದಾರೆ. ಕೃತಿಗಾರ್ತಿ ಪರಿಣಿತ ರವಿ ಸಭೆಯಲ್ಲಿ ಉಪಸ್ಥಿತರಿರುವರು.


