ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿಯ ಹಸಿರು ಕರ್ಮ ಸೇನಾ ಸಮಿತಿ ನೇತೃತ್ವದಲ್ಲಿ ಮನೆ ಮನೆ ಪ್ಲಾಸ್ಟಿಕ್ ಸಂಗ್ರಹ ಯೋಜನೆಯ 14ನೇ ವಾರ್ಡಿನ ಉದ್ಘಾಟನೆ ಶೇಣಿ ವಾರ್ಡಿನಲ್ಲಿ ಇತ್ತೀಚೆಗೆ ನಡೆಯಿತು.
ಎಣ್ಮಕಜೆ ಗ್ರಾ.ಪಂ.ಸದಸ್ಯೆ ಪುಷ್ಪಾ ಪ್ಲಾಸ್ಟಿಕ್ ಸಂಗ್ರಹ ಯೋಜನೆಯನ್ನು ಉದ್ಘಾಟಿಸಿ ಮನೆ ಮನೆಗೆ ಕಾರ್ಡ್ ವಿತರಣೆಗೆ ಚಾಲನೆ ನೀಡಿದರು. ಹಸಿರು ಕರ್ಮ ಸೇನಾ ಸಮಿತಿ ಕಾರ್ಯಕರ್ತೆಯರಾದ ಕೆ.ಪಿ.ಹೇಮಾವತಿ ಮಣಿಯಂಪಾರೆ,ಮೇರಿ ಲೋಬೊ ಬೊಲ್ಕಿನಡ್ಕ ಉಪಸ್ಥಿತರಿದ್ದರು. ಮನೆ ಮನೆಗಳಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಮಾಲಿನ್ಯವನ್ನು ಪ್ರತಿ ತಿಂಗಳಿಗೊಮ್ಮೆ ಈ ಸಮಿತಿಯ ನೇತೃತ್ವದಲ್ಲಿ ಸಂಗ್ರಹಿಸಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.


