ಮುಳ್ಳೇರಿಯ: ಕರ್ನಾಟಕದ ಶಿಕ್ಷಣ ಇಲಾಖೆಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ, ಗೋಳಿದಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತಿ ಹೊಂದಿದ ಕೆ.ವಿ.ಕುಂಞÂರಾಮನ್ ಅವರ ಬೀಳ್ಕೊಡುವ ಸಮಾರಂಭ ಜು.6ರಂದು ಮಧ್ಯಾಹ್ನ 2.30ಕ್ಕೆ ಶಾಲೆಯಲ್ಲಿ ನಡೆಯಲಿದೆ.
ಪುತ್ತೂರು ಶಾಸಕ ಸಂಜೀವ ಮಠಂದೂರು ನಿವೃತ್ತರನ್ನು ಸನ್ಮಾನಿಸುವರು. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕರಿ.ಆರ್ ಭಂಡಾರಿ ಅಧ್ಯಕ್ಷತೆ ವಹಿಸುವರು. ಪುತ್ತೂರು ತಾಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ದ.ಕ.ಜಿ.ಪ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮನಾಥ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ಫೌಝಿಯಾ ಇಬ್ರಾಹಿಂ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀರಾಮ ಪಕ್ಕಳ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಅಬ್ದುಲ್ಲ, ಸುರೇಶ್ ನಾಯ್ಕ, ಅಸ್ಮ, ವಿಜಯ ರೈ, ವಿಷ್ಣುಪ್ರಸಾದ್.ಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನಿವೃತ್ತ ಮುಖ್ಯ ಶಿಕ್ಷಕ ಸದಾಶಿವ ರೈ ಎಸ್.ಎನ್ ಅಭಿನಂದನಾ ಭಾಷಣ ಮಾಡುವರು. ಮೇನಾಲ ಕ್ಲಸ್ಟರ್ ಸಿಆರ್‍ಪಿ ಜಯಂತಿ.ಎನ್, ಅಶ್ರಫ್ ಕೊಟ್ಯಾಡಿ ಭಾಗವಹಿಸುವರು.

