ಮಂಜೇಶ್ವರ: 2018-19 ನೇ ಸಾಲಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಬುಲ್ ಬುಲ್ ವಿಭಾಗದಲ್ಲಿ ನಡೆಸುವ ರಾಜ್ಯಮಟ್ಟದ ಹೀರಕ್ ಪದಕ ಪರೀಕ್ಷೆಯಲ್ಲಿ ಕೊಡ್ಲಮೊಗರು ಶ್ರೀ ವಾಣೀವಿಜಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಐವರು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಈಗ ಐದನೇ ತರಗತಿಯಲ್ಲಿ ಕಲಿಯುತ್ತಿರುವ ಆಯಿಷತ್ ಶಮ್ನ, ಫಾತಿಮತ್ ನಾಫಿಯ, ಫಾತಿಮತ್ ಹೈಫ, ಮುಹಶೀನ ಮತ್ತು ಕೃತಿ ಹೀರಕ್ ಪದಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿಜೇತರು. ಶಾಲಾ ಬುಲ್ ಬುಲ್ ಶಿಕ್ಷಕಿ ಜ್ಯೋತಿಲಕ್ಷ್ಮೀ ಮಕ್ಕಳಿಗೆ ಮಾರ್ಗದರ್ಶನ ನೀಡಿದ್ದರು. ಪ್ರತಿಭಾಶಾಲಿ ವಿದ್ಯಾರ್ಥಿನಿಯರನ್ನು ಶಾಲಾ ಪ್ರಬಂಧಕರು, ಮುಖ್ಯೋಪಾಧ್ಯಾಯಿನಿ ಮತ್ತು ಅಧ್ಯಾಪಕ ವೃಂದದವರು ಹಾಗೂ ಶಾಲಾ ರಕ್ಷಕ ಶಿಕ್ಷಕರ ಸಂಘ ಅಭಿನಂದಿಸಿತು.
ಕೊಡ್ಲಮೊಗರು ಶ್ರೀ ವಾಣೀವಿಜಯ ಶಾಲೆಗೆ ಹೀರಕ್ ಪದಕದ ಗರಿ
0
ಜುಲೈ 04, 2019