ಮುಳ್ಳೇರಿಯ : ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ವಾರ್ಷಿಕ ಮಹಾಸಭೆಯು ಜು.7ರಂದು ಬೆಳಿಗ್ಗೆ 9ರಿಂದ ಮುಳ್ಳೇರಿಯ ಸಮೀಪದ ಬೆಳ್ಳೂರು ಮಹಾವಿಷ್ಣು ಕ್ಷೇತ್ರದ ಸಭಾಂಗಣದಲ್ಲಿ ನಡೆಯಲಿದೆ.
ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಕೋಟೆಗದ್ದೆ ದಿನೇಶ್ ಕುಮಾರ ಅಡಿಗ ಧ್ವಜಾರೋಹಣ ಮಾಡುವರು. ಬೆಳಿಗ್ಗೆ 9.30ರಿಂದ ನೋಂದಾವಣೆ ಆರಂಭವಾಗಲಿದೆ. ಬೆಳಗ್ಗೆ 10 ರಿಂದ ನಡೆಯುವ ಮಹಾಸಭೆಯಲ್ಲಿ ವಾರ್ಷಿಕ ವರದಿ ಮಂಡನೆ, ಲೆಕ್ಕಪತ್ರ ಮಂಡನೆ, ಚರ್ಚೆ, ಅಂಗೀಕಾರ, ಠರಾವುಗಳ ಮಂಡನೆ ಹಾಗೂ ಅನುಮೋದನೆ, ಮುಂದಿನ ವಿವಿಧ ಯೋಜನೆಗಳ ಬಗ್ಗೆ ಅವಲೋಕನ, ನೂತನ ಸಮಿತಿ ಪದಾಧಿಕಾರಿಗಳ ಆಯ್ಕೆ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ. ಈ ಸಂದರ್ಭದಲ್ಲಿ ನಿರೀಕ್ಷಕರಾಗಿ ಉಡುಪಿ ಮಾಧ್ವ ಬ್ರಾಹ್ಮಣ ಸಭಾದ ಕೇಂದ್ರ ಕಾರ್ಯಕಾರಿ ಸಮಿತಿ ಅಧ್ಯಕ್ಷ ವಿಶ್ರುತ್ ಪಿ ಆರ್ ಭಾಗವಹಿಸಲಿದ್ದಾರೆ. ಅಪರಾಹ್ನ 2ರಿಂದ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಿವಳ್ಳಿ ಬ್ರಾಹ್ಮಣ ಸಭಾದ ಕಾಸರಗೋಡು ಜಿಲ್ಲಾ ಅಧ್ಯಕ್ಷ ಲಕ್ಷ್ಮೀಶ ರಾವ್ ಕಡಂಬಾರ್ ವಹಿಸುವರು. ಸಾಮಾಜಿಕ ಕಾರ್ಯಕರ್ತ ನನ್ಯ ಅಚ್ಯುತ ಮೂಡಿತ್ತಾಯ ಹಾಗೂ ಯುಎಂಬಿಎಸ್ ಮುಖಂಡ ವಿಶ್ರುತ್ ಪಿ ಆರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭದಲ್ಲಿ ಸಮುದಾಯದ ವ್ಯಾಪ್ತಿಯಲ್ಲಿ ವಿಶಿಷ್ಟ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಪುರಸ್ಕಾರ, ಉತ್ತಮ ಸಮಾಜ ಸೇವಕ ಸೇವಕಿ ಪುರಸ್ಕಾರ, ಇತ್ತೀಚೆಗೆ ತೃಶೂರಿನಲ್ಲಿ ನಡೆದ ಕೇರಳ ರಾಜ್ಯ ಮಟ್ಟದ ಉಡುಪಿ ಮಾಧ್ವ ಬ್ರಾಹ್ಮಣ ಸಭಾದ ಸಾಂಸ್ಕøತಿಕ ಸಮ್ಮೇಳನದಲ್ಲಿ ಭಾಗವಹಿಸಿ ಬಹುಮಾನ ಪಡೆದ ಕಾಸರಗೋಡು ಜಿಲ್ಲೆಯ ಪ್ರತಿಭೆಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಶಿವಳ್ಳಿ ಸಮುದಾಯದ ಬಾಂಧವರು ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.

