ಮಂಜೇಶ್ವರ: ಆನೆಕಲ್ಲಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನೆ, ಪ್ರಮಾಣವಚನ ಸ್ವೀಕಾರ, ಜೂನ್ ತಿಂಗಳ ಸಾಹಿತ್ಯ ಸಭೆ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತ್ಯನಾರಾಯಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕಿ ರೇಣುಕಾ ವಿ ಅಧ್ಯಕ್ಷತೆ ವಹಿಸಿದರು. ಶಾಲಾ ಮಂತ್ರಿಮಂಡಲದ ಮುಖ್ಯಮಂತ್ರಿಯಾದ ವಿದ್ಯಾರ್ಥಿನಿ ಜೆಸಿರ ಮತ್ತು ವಿವಿಧ ಖಾತೆಗಳ ಮಂತ್ರಿಗಳಿಗೆ ಮುಖ್ಯಶಿಕ್ಷಕಿ ಪ್ರಮಾಣವಚನ ಬೋಧಿಸಿದರು. ಬಳಿಕ ಜೂನ್ ತಿಂಗಳ ಸಾಹಿತ್ಯ ಸಭೆಯ ಪ್ರಯುಕ್ತ ಎಲ್ಲಾ ತರಗತಿಯ ಮಕ್ಕಳಿಂದ ಜನಪದ ಗೀತೆಗಳ ಗಾಯನ ನಡೆಯಿತು. ಹರೀಶ ವಿ ಸ್ವಾಗತಿಸಿ, ಶಿಕ್ಷಕಿ ಹರಿಣಾಕ್ಷಿ ವಂದಿಸಿದರು. ಗೀತಾ ಪಿ ಕಾರ್ಯಕ್ರಮವನ್ನು ನಿರೂಪಿಸಿದರು.

