ಕುಂಬಳೆ: ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಯಿಂದ ಕುಂಬಳೆಯಲ್ಲಿ ಶುಕ್ರವಾರ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಉದ್ಘಾಟಿಸಿದರು. ಮಂಡಲ ಉಪಾಧ್ಯಕ್ಷ ವಿನೋದ್ ಕಡಪ್ಪರ, ಇತರ ಹಿಂದುಳಿದ ವರ್ಗದ ಮೋರ್ಚಾ(ಒಬಿಸಿ) ಮಂಡಲ ಪ್ರದಾನ ಕಾರ್ಯದರ್ಶಿ ಶಶಿ ಕುಂಬಳೆ ಉಪಸ್ಥಿತರಿದ್ದು ಮಾತನಾಡಿದರು. ವಿವೇಕಾನಂದ, ಕೇಶವ ನಾಯ್ಕ್ ಉಪಸ್ಥಿತರಿದ್ದರು. ಸುಜಿತ್ ರೈ ಸ್ವಾಗತಿಸಿ, ಬಿಜೆಪಿ ಪಂಚಾಯತಿ ಪ್ರಭಾರಿ ಮಣಿಕಂಠ ರೈ ವಂದಿಸಿದರು.


