ಉಪ್ಪಳ: ಓದುವಿಕೆಯಿಂದ ಪರಸ್ಪರ ಸಂಬಂಧಗಳು ಅರ್ಥವಾಗಿ ಬಲಗೊಳ್ಳುತ್ತದೆ. ನಮ್ಮ ಜ್ಞಾನ ಭಂಡಾರ ತುಂಬುತ್ತದೆ. ಆದರೆ ಅದು ವಾಚನ ಸಪ್ತಾಹಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಚಿತ್ರನಟ ಅಡೂರು ಬಾಲಕೃಷ್ಣ ನುಡಿದರು.
ಅವರು ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ ನಡೆದ ವಾಚನ ಸಪ್ತಾಹ ಸಮಾರೋಪ ಹಾಗೂ ವಿವಿಧ ಕ್ಲಬ್‍ಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಶಾಲಾ ಮುಖ್ಯೋಪಾಧ್ಯಾಯ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಧ್ಯಾಪಕ ರವೀಂದ್ರನಾಥ್ ಕೆ ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲಯಾಳ ವಿಭಾಗದ ಸಿಂಧುಜ ಶುಭಾಶಂಸನೆಗೈದರು. ಓದಿನ ಟಿಪ್ಪಣಿ ಸಂಗ್ರಹ ಗರಿಯನ್ನು ಅಡೂರು ಬಾಲಕೃಷ್ಣನ್ ಬಿಡುಗಡೆಗೊಳಿಸಿದರು. ಓದಿನ ಟಿಪ್ಪಣಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಝ್ಮಿ ಸ್ವಾಗತಿಸಿ, ನಫೀಸತ್ ಸಲೀಮ ವಂದಿಸಿದರು. ನಿಶ್ಮಿತ ನಿರೂಪಿಸಿದರು. ವಿದ್ಯಾರಂಗದ ರೈನ ಇವೆಟ್ ಡಿಸೋಜ, ಶಶಿಕಲ ಕೆ, ಪ್ರವೀಣ್ ಕನಿಯಾಲ ನೇತೃತ್ವ ನೀಡಿದರು.


