ಪೆರ್ಲ: ಕಾಸರಗೋಡಿನ ನೂತನ ಸಂಸದ ರಾಜಮೋಹನ ಉಣ್ಣಿತ್ತಾನ್ ಅವರಿಗೆ ಎಣ್ಮಕಜೆ ಪಂಚಾಯತಿ ಯುಡಿಎಫ್ ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಇತ್ತೀಚೆಗೆ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದ ಸಮಸದರು ಎಣ್ಮಕಜೆ ಗ್ರಾಮ ಪಂಚಾಯತಿಯ ಸಮಗ್ರ ಅಭಿವೃದ್ದಿಗಾಗಿ ರಾಜಕೀಯಾತೀತನಾಗಿ ಪ್ರಾಮಾಣಿಕ ಪ್ರಯತ್ನ ನಡೆಸುವೆನು. ಕಾಂಗ್ರೆಸ್ಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯದಲ್ಲಿ ಗುರುತಿಸಲ್ಪಟ್ಟ ತನಗೆ ಕಾಸರಗೋಡಿನ ಜನರ ಸೇವೆಗೆ ಅವಕಾಶಮಾಡಿಕೊಟ್ಟ ಪ್ರಜ್ಞಾವಂತ ಮತದಾರರಿಗೆ ತಾನು ಅಭಾರಿಯಾಗಿರುವುದಾಗಿ ತಿಳಿಸಿದರು.
ಯುಡಿಎಫ್ ಎಣ್ಮಕಜೆ ಘಟಕಾಧ್ಯಕ್ಷ ಬಿ.ಎಸ್.ಗಾಂಭೀರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್., ಮಂಜೇಶ್ವರ ವಿಧಾನ ಸಭಾ ಯುಡಿಎಫ್ ಸಮಿತಿ ಅಧ್ಯಕ್ಷ ಮಂಜುನಾಥ ಆಳ್ವ, ಜಿಲ್ಲಾ ಕಾಂಗ್ರೆಸ್ಸ್ ಕಾರ್ಯದರ್ಶಿ ಜೇಮ್ಸ್, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ, ಜನತಾದಳ ನೇತಾರ ಎಂ.ಎಚ್.ಜನಾರ್ದನ್, ಡಿ.ಎ.ಟಿ.ಎಂ.ನೇತಾರ ಲಕ್ಷ್ಮಣ ಪ್ರಭು ಕುಂಬಳೆ, ಮುಖಂಡರಾದ ಸಿದ್ದಿಕ್ ಖಂಡಿಗೆ, ಮಹಮ್ಮದಾಲಿ ಪೆರ್ಲ, ಆಮು ಅಡ್ಕಸ್ಥಳ, ಅಬ್ದುಲ್ ರಹಿಮಾನ್ ಪೆರ್ಲ, ಸಿದ್ದೀಕ್ ಒಳಮೊಗರು, ಐತ್ತಪ್ಪ ಕುಲಾಲ್, ಆಯಿಷಾ ಎ.ಎ.ಪೆರ್ಲ, ಜಯಶ್ರೀ ಕುಲಾಲ್, ಪುರುಷೋತ್ತಮ ಭಟ್ ಮಿತ್ತೂರು ಉಪಸ್ಥಿತರಿದ್ದು ಶುಭಹಾರೈಸಿದರು.
ಸಮಾರಂಭದಲ್ಲಿ ಬೆಂಗಳೂರಿನ ರಾಜೀವಗಾಂಧಿ ವಿವಿಯ ಬಿಎಎಂಎಸ್ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತೆ ರಂಯಶ್ರೀ ಪಡ್ರೆ ಮತ್ತು ಕಣ್ಣೂರು ವಿವಿಯ ಪದವಿ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಪಡೆದ ಫಾತಿಮತ್ ಫರ್ಸೀನಾ ಅಮೆಕ್ಕಳ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಯುಡಿಎಫ್ ಎಣ್ಮಕಜೆ ಪಂಚಾಯತಿ ಘಟಕದ ಕಾರ್ಯದರ್ಶಿ ಅಬೂಬಕರ್ ಪೆರ್ದನೆ ಸ್ವಾಗತಿಸಿ, ವಂದಿಸಿದರು.


