ಮಂಜೇಶ್ವರ: ದೈಗೋಳಿ ಜ್ಞಾನೋದಯ ಸಮಾಜದ ಆಶ್ರಯದಲ್ಲಿ ಜರಗುವ 38 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚನಾ ಸಭೆ ದೈಗೋಳಿ ಶ್ರೀ ಗಣೇಶ ಮಂದಿರದಲ್ಲಿ ಜ್ಞಾನೋದಯ ಸಮಾಜದ ಅಧ್ಯಕ್ಷರಾದ ಪಿ.ಶಿವರಾಮ ಭಟ್ ಮಡ್ವ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
ಸೆ.2 ರಂದು ಗಣೇಶೋತ್ಸವವನ್ನು ಆಚರಿಸಲು ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಪಿ.ಶಿವರಾಮ ಭಟ್ ಮಡ್ವ, ಅಧ್ಯಕ್ಷರಾಗಿ ಸತ್ಯನಾರಾಯಣ ಭಟ್ ದೈಗೋಳಿ, ಉಪಾಧ್ಯಕ್ಷರಾಗಿ ಸೋಮಪ್ಪ ದೈಗೋಳಿ, ಜಗನ್ನಾಥ ಎಂ.ದೈಗೋಳಿ, ಸಂತೋಷ್ ಕುಮಾರ್ ಶೆಟ್ಟಿ ದೈಗೋಳಿ, ಕಾರ್ಯದರ್ಶಿಯಾಗಿ ಸುಧೀರ್ ರಂಜನ್ ದೈಗೋಳಿ, ಜೊತೆ ಕಾರ್ಯದರ್ಶಿಗಳಾಗಿ ಮಾಧವ ಶೆಟ್ಟಿಗಾರ್ ದೈಗೋಳಿ, ಮಾಧವ ನೀರಳಿಕೆ, ನವೀನ ಅಡೆಕಳಕಟ್ಟೆ, ಕೋಶಾಧಿಕಾರಿಯಾಗಿ ಚಂದ್ರಹಾಸ ಹೆಬ್ಬಾರ್ ದೈಗೋಳಿ, ಸಂಚಾಲಕರಾಗಿ ಶಂಕರನಾರಾಯಣ ಭಟ್ ದೈಗೋಳಿ, ರಾಜಗೋಪಾಲ ದೈಗೋಳಿ, ಬಾಬು ಮೂಲ್ಯ ದೈಗೋಳಿ, ಗೋವಿಂದ ರಾಮ್ ಕಣಕ್ಕೂರು ಹಾಗು ಇತರ 10 ಮಂದಿಯ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಸದಸ್ಯರಾದ ಬಜೆ ವೆಂಕಟೇಶ್ವರ ಭಟ್ ದೈಗೋಳಿ, ತಿರುಮಲೇಶ್ವರ ಶಾಸ್ತ್ರಿ ಚಕ್ರಕೋಡಿ, ಬಾಲಕೃಷ್ಣ ಕುಲಾಲ್ ದೈಗೋಳಿ, ಕೃಷ್ಣ ಸಾಯಿ ನಿಲಯ ದೈಗೋಳಿ, ಕೇಶವ ಅಡೆಕಳಕಟ್ಟೆ, ಜಯಕಿರಣ್, ಕೆ.ವಾಸು ದೈಗೋಳಿ ಮತ್ತಿತರರು ಉಪಸ್ಥಿತರಿದ್ದರು. ಸುಧೀರ್ ರಂಜನ್ ಸ್ವಾಗತಿಸಿ, ಮಾಧವ ಶೆಟ್ಟಿಗಾರ್ ವಂದಿಸಿದರು.

