ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತಿ ಸಾಕ್ಷರತಾ ಮಿಷನ್ ನೇತೃತ್ವದಲ್ಲಿ ಮಂಜೇಶ್ವರ ಎಸ್.ಎ.ಟಿ. ಶಾಲೆಯ ಅನಂತ ವಿದ್ಯಾ ಸಭಾಂಗಣದಲ್ಲಿ ವಾಚನಾ ಸಪ್ತಾಹ ಇತ್ತೀಚೆಗೆ ಜರುಗಿತು. ರಾಜ್ಯ ಸಾಕ್ಷರತಾ ಮಿಷನ್ ವತಿಯಿಂದ ನಡೆದ ವಾಚನ ಸಪ್ತಾಹ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು.
ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಸಮಾರಂಭ ಉದ್ಘಾಟಿಸಿದರು. ತತ್ಸಮಾನ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಹೊಂದಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕೊಡ್ಲಮೊಗರು ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲೆ ಕೃಷ್ಣವೇಣಿ ಅಧ್ಯಕ್ಷತೆ ವಹಿಸಿದ್ದರು. "ಓದುವಿಕೆಯ ಮಹತ್ವ" ಎಂಬ ವಿಷಯದಲ್ಲಿ ಕಿಶೋರ್ ಮಾಸ್ತರ್ ಉಪನ್ಯಾಸ ಮಾಡಿದರು. ಜಿಲ್ಲಾ ಸಾಕ್ಷರತಾ ಮಿಷನ್ ಸಹಾಯಕ ಸಂಚಾಲಕ ಶಾಸ್ತಾ ಪ್ರಸಾದ್ ಮುಖ್ಯ ಅತಿಥಿಯಾಗಿದ್ದರು. ಬ್ಲಾಕ್ ಮಟ್ಟದ ಸಾಕ್ಷರತಾ ಮಿಷನ್ ಸಂಚಾಲಕಿ ಗ್ರೇಸಿ ವೇಗಸ್ ಸ್ವಾಗತಿಸಿ, ಪಂಚಾಯತಿ ಸಂಚಾಲಕಿ ಸುಜ ಡಿ. ಶೆಣೈ ವಂದಿಸಿದರು.


