ಕಾಸರಗೋಡು: ರಾಜ್ಯ ಸರಕಾರದ ಪ್ರಕಟಣೆಗಳನ್ನು ಸಾರ್ವಜನಿಕರಿಗೆ, ಸರಕಾರಿ ಸಿಬ್ಬಂದಿಗೆ ಮತ್ತುವಿದ್ಯಾರ್ಥಿಗಳಿಗೆ ತಲಪಿಸುವ ನಿಟ್ಟಿನಲ್ಲಿ ಚಂದಾದಾರಿಕೆ ಕ್ಯಾಂಪೇನ್ ಜಿಲ್ಲೆಯಲ್ಲಿ ಮಂಗಳವಾರ ಆರಂಭಗೊಂಡಿದೆ.
ಕೇರಳ ಕಾಲಿಂಗ್ ಮತ್ತು ಜನಪಥಂ ಎಂಬ ಮಾಸಪತ್ರಿಕೆಗಳ ಚಂದಾದಾರಿಕೆ ಈ ಮೂಲಕ ನಡೆಯುತ್ತಿದೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಈ ಸಂಬಂಧ ಜರುಗಿದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಕ್ಯಾಂಪೇನ್ ಗೆ ಚಾಲನೆ ನೀಡಿದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಅವರು ಪ್ರಕಟನೆಗಳನ್ನು ಬಶೀರ್ ಅವರಿಗೆ ಹಸ್ತಾಂತರಿಸಿದರು. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಚಂದಾದಾರಿಕೆ ವರ್ಷಕ್ಕೆ ತಲಾ 120 ರೂ. ಆಗಿದ್ದು, ಉಳಿದ ಪತ್ರಿಕೆಗಳಿಗೆ ಹೋಲಿಸಿದರೆ ಇದು ಬಹಳಕಡಿಮೆಯಾಗಿದೆ. ಸರಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಕ್ಯಾಂಪೇನ್ ಗೆ ಸಿಬ್ಬಂದಿ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.


