HEALTH TIPS

ವಾರ್ಷಿಕ ಯೋಜನೆಗಳಲ್ಲಿ ಬದಲಾವಣೆ

             ಕಾಸರಗೋಡು: ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ 2019-20ರ ವಾರ್ಷಿಕ ಯೋಜನೆ ದಾಖಲೆಗಳಲ್ಲಿ ಬದಲಾವಣೆ ನಡೆಸಲಾಗಿದೆ.
            ಈ ಯೋಜನೆಗಳಲ್ಲಿ ಟೆಂಡರ್ ಕ್ರಮ ಪೂರ್ತಿಗೊಳಿಸಿ ಎಗ್ರಿಮೆಂಟ್ ನಡೆಸಿ ತಕ್ಷಣನಿರ್ವಹಣೆ ಆರಂಭಿಸಲು ನಿರ್ಧರಿಸಲಾಗಿದೆ.  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಯೋಜನೆ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
           ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕಷತೆ ವಹಿಸಿದ್ದರು. ಹರಿತಕೇರಳಂ ಮಿಷನ್ ಮುಖಾಂತರ ಜಿಲ್ಲೆಯಲ್ಲಿ ಜಾರಿಗೊಳಿಸುವ ಹರಿತ ಮುಟ್ಟಂ(ಹಸುರು ಅಂಗಳ), ಪೆನ್ಫ್ರೆಂಡ್, ಪಚ್ಚ ತುರುತ್ (ಹಸುರು ದ್ವೀಪ) ಇತ್ಯಾದಿ ಯೋಜನೆಗಳನ್ನು ಎಲ್ಲ ಸ್ಥಳೀಯಾಡಳಿತ ಸಂಸ್ಥೇಗಳ ವ್ಯಾಪ್ತಿಯಲ್ಲೂ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಕಾ?ಂಗಾಡ್ ನಗರಸಭೆಯ ಅಯ್ಯಂಗಾಳಿ ನಗರ ನೌಕರಿ ಖಾತರಿ ಯೋಜನೆಯ ಕ್ರಿಯಾ ಯೋಜನೆ, ಕಾರ್ಮಿಕ ಮುಂಗಡಪತ್ರ ಇತ್ಯಾದಿಗಳಿಗೆ ಅಂಗೀಕಾರ ನೀಡಲಾಯಿತು. ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಆಯಾ ಸಂಸ್ಥೆಗಳ ಯೋಜನೆ ಮಾಹಿತಿಗಳನ್ನು ಪ್ರಸ್ತುತಗೊಳಿಸಿದರು.
         ಜಿಲ್ಲಾ ಹೆಚ್ಚುವರಿ ಯೋಜನಾಧಿಕಾರಿ  ಸಾಬು ಸಿ.ಮ್ಯಾಥ್ಯೂ, ಯೋಜನೆ ಸಮಿತಿಯ ಸರಕಾರಿ ನಾಮಿನಿ ಕೆ.ಬಾಲಕೃಷ್ಣನ್, ಜಿಲ್ಲಾ ಯೋಜನೆ ಸಮಿತಿ ಸದಸ್ಯರಾದ ಹರ್ಷಾದ್ ವರ್ಕಾಡಿ, ಡಾ.ವಿ.ಪಿ.ಪಿ.ಮುಸ್ತಫ, ಇ.ಪದ್ಮಾವತಿ, ಫರೀದಾ ಝಕೀರ್ ಅಹಮ್ಮದ್, ಮುಂತಾಝ್ ಝಮೀರ, ಪುಷ್ಪಾ ಅಮೆಕ್ಕಳ, ಷಾನವಾಝ್ ಪಾದೂರು, ಎ.ಎ.ಜಲೀಲ್, ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ, ಗ್ರಾಮಪಂಚಾಯತ್ ಅಧ್ಯಕ್ಷರು, ಕಾರ್ಯದರ್ಶಿಗಳು ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries