ಸಮರಸ ಚಿತ್ರ ಸುದ್ದಿ: ಕುಂಬಳೆ: ಚೇವಾರು ಸಮೀಪದ ಸುಬ್ಬಯ್ಯಕಟ್ಟೆ ಬಳಿಯ ಕುಂಡೇರಿ ಜಲಪಾತ ಮೈವೆತ್ತಿದ್ದು, ಜಲಧಾರೆಗಳ ನೃತ್ಯಾರ್ಪಣೆಯೊಂದಿಗೆ ಸಾಗರನೊಂದಿಗೆ ಏರುವ ತವಕದಲ್ಲಿ ಓಡುತ್ತಿರುವಂತೆ ಕಂಡುಬಂದಿದೆ.
ಮಳೆಗಾಲದಲ್ಲಿ ಮಾತ್ರ ದುಮ್ಮಿಕ್ಕಿ ಹರಿಯುವ ಕುಂಡೇರಿ ಜಲಪಾತ ಈ ವರ್ಷ ಕುಸಿದ ಮುಂಗಾರಿನ ಮಧ್ಯೆ ಆಗೀಗ ಸುರಿದ ಮಳೆಗೆ ಒರತೆ ಬಲಗೊಂಡು ವೇಗಪಡೆದಿದ್ದು, ನೂರಾರು ಜನರು ವೀಕ್ಷಿಸಲು ಆಗಮಿಸುತ್ತಿದ್ದಾರೆ.


