ಬದಿಯಡ್ಕ: ಬೆಳಿಂಜ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಶುಕ್ರವಾರ ಜರಗಿತು. ನೂತನ ಅಧ್ಯಕ್ಷರಾಗಿ ಅಬ್ದುಲ್ಲ ಗೋಳಿಕಟ್ಟೆ ಪುನರಾಯ್ಕೆಗೊಂಡರು. ಮಾತೃಮಂಡಳಿಯ ಅಧ್ಯಕ್ಷೆಯಾಗಿ ಸರಸ್ವತಿ ಆಯ್ಕೆಯಾದರು. 21ಮಂದಿಯ ಕಾರ್ಯಕಾರಿ ಸಮಿತಿ ರೂಪಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಎ ಪ್ಲಸ್ ಗಳಿಸಿದ ಶಾಲೆಯ ಹಳೆವಿದ್ಯಾರ್ಥಿಗಳಾದ ಶ್ರೀರಮಣ ಬಿ. ಜಿ., ಫಾತಿಮತ್ ಅಂಸೀನ, ಫಾತಿಮತ್ ಸಹಲ, ಮೋನಿಷ ಇವರನ್ನು ಗೌರವಿಸಲಾಯಿತು. ಗ್ರಾ.ಪಂ. ಸದಸ್ಯ ಬಿ. ಟಿ.ಅಬ್ದುಲ್ಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾ ವ್ಯವಸ್ಥಾಪಕ ಅಬ್ದುಲ್ಲ ಹಾಜಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಸೂರ್ಯನಾರಾಯಣ ಬಿ. ವರದಿ ಮಂಡಿಸಿದರು. 100ಕ್ಕೂ ಹೆಚ್ಚು ಮಂದಿ ರಕ್ಷಕರು ಭಾಗವಹಿಸಿದ್ದರು. ರವೀಂದ್ರ ಕೆ. ಸ್ವಾಗತಿಸಿ, ಕುಟ್ಟನ್ ಪಿ.ಕೆ. ವಂದಿಸಿದರು.
ಬೆಳಿಂಜ ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆ
0
ಜುಲೈ 20, 2019