ಕುಂಬಳೆ: ಜಲ ಸಂಪತ್ತು ಅಮೂಲ್ಯವಾದುದು. ಅದನ್ನು ಸಂರಕ್ಷಿಸುವುದು, ಮಿತವಾಗಿ ಬಳಸುವುದು ನಮ್ಮ ಆದ್ಯ ಕರ್ತವ್ಯ ಎಂದು ಪೇರಾಲು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಬಿ.ಎ ಪೇರಾಲು ನುಡಿದರು.
ಶಾಲೆಯಲ್ಲಿ ಗುರುವಾರ ನಡೆದ ಜಲಶಕ್ತಿ ಅಭಿಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಅಧಿಕಗೊಂಡಿರುವ ಜನಸಂಖ್ಯೆ ಮತ್ತು ಪರಿಣಾಮವಾದ ಬಳಕೆಯ ಹೆಚ್ಚುವಿಕೆಗೆ ಅನುಸಾರ ಭೂಜಲ ಮಟ್ಟವನ್ನು ನಿಯಂತ್ರಿಸುವಲ್ಲಿ ಅಸಾಧ್ಯತೆ ತಲೆದೋರಿದೆ. ಜಲಮರುಪೂರಣದಂತಹ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಅರು ಈ ಸಂದರ್ಭ ಕರೆನೀಡಿದರು.
ಜಲಶಕ್ತಿ ಅಭಿಯಾನದ ಅಂಗವಾಗಿ ಮಕ್ಕಳು ಜಲಸಂರಕ್ಷಣೆ ಮತ್ತು ಮಿತ ಪ್ರಮಾಣದ ಜಲ ಬಳಕೆಯ ಕುರಿತಾಗಿ ಮಕ್ಕಳು ಪ್ರತಿಜ್ಞಾ ಸ್ವೀಕಾರ ಮಾಡಿದರು. ಹಿರಿಯ ಅಧ್ಯಾಪಕ ವಿನುಕುಮಾರ್ ಪ್ರತಿಜ್ಞೆ ಬೋಧಿಸಿದರು. ಮುಖ್ಯೋಪಾಧ್ಯಾಯ ಗುರುಮೂರ್ತಿ ನಾಯ್ಕಾಪು ನೇತೃತ್ವ ವಹಿಸಿದ್ದರು.



