ಬದಿಯಡ್ಕ: ಮುಳ್ಳೇರಿಯಾ ಹವ್ಯಕ ಮಂಡಲ ಮಾತೃ ವಿಭಾಗದ ಸಹಯೋಗದಲ್ಲಿ ಪಳ್ಳತ್ತಡ್ಕ ಮುದ್ದುಮಂದಿರದಲ್ಲಿ ಗುರುಪರಂಪರಾ ಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀ ನೃಸಿಂಹಕರಾವಲಂಬ ಸ್ತೋತ್ರ ಉಪಾಸನಾ ಸಮಾರಂಭವು ಶುಕ್ರವಾರ ಸಂಪನ್ನವಾಯಿತು.
ಧ್ವಜಾರೋಹಣ, ಗುರುವಂದನೆ ಮತ್ತು ಗೋ ಸ್ತುತಿಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಪಳ್ಳತ್ತಡ್ಕ ವಲಯ ಅಧ್ಯಕ್ಷ ರಾಮಕೃಷ್ಣ ಭಟ್ ಧ್ವಜಾರೋಹಣಗೈದರು. ವೇದಮೂರ್ತಿ ಸುರೇಶ ಭಟ್ ಪಳ್ಳತ್ತಡ್ಕ ವೈದಿಕ ಕಾರ್ಯಕ್ರಮವನ್ನು ನಡೆಸಿದರು.
ಈ ಸಂದರ್ಭದಲ್ಲಿ ವಿಷ್ಣುಗುಪ್ತ ವಿದ್ಯಾಪೀಠ ಯೋಜನೆಗೆ ದೇಣಿಗೆ ಸಮರ್ಪಿಸಲಾಯಿತು. ವಿವಿಧ ವಲಯಗಳಿಂದ ಪದಾಧಿಕಾರಿಗಳು, ಮಾತೃವಿಭಾಗದವರು, ಕಾರ್ಯಕರ್ತರು ಭಾಗವಹಿಸಿದರು.


