ಕುಂಬಳೆ: ಸಹಕಾರ ಭಾರತಿ ಮಂಜೇಶ್ವರ ತಾಲೂಕು ಸಮಿತಿಯ ಸಭೆಯು ಕುಂಬಳೆ ವ್ಯಾಯಾಮ ಶಾಲೆಯಲ್ಲಿ ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾದ ಗಣಪತಿ ಕೋಟೆಕಣಿ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ಸಹಕಾರ ಭಾರತಿ ಸದಸ್ಯತನ ಅಭಿಯಾನದ ಕುರಿತು ಚರ್ಚಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರಿಗಳನ್ನು ಸದಸ್ಯತನ ಪಡೆಯುವಂತೆ ಕೇಳಿಕೊಳ್ಳಲಾಯಿತು. ಸಹಕಾರ ಭಾರತಿ ಮಂಜೇಶ್ವರ ತಾಲೂಕು ಸಮ್ಮೇಳನ ಆಗಸ್ಟ್ 10 ರಂದು ಶನಿವಾರ ಮಧ್ಯಾಹ್ನದ ಬಳಿಕ ಕುಂಬಳೆಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ತಾಲೂಕು ಸಮ್ಮೇಳನದ ಯಶಸ್ವಿಗಾಗಿ ಸಂಚಾಲನ ಸಮಿತಿಯನ್ನು ರೂಪೀಕರಿಸ ಲಾಯಿತು. ನಾರಾಯಣ ತುಂಗಾ ವರ್ಕಾಡಿ ಅವರನ್ನು ಅಧ್ಯಕ್ಷರಾಗಿಯೂ, ರಾಜೇಶ್ ಕುಮಾರ್ ಬಂಬ್ರಾಣ ಕಾರ್ಯದರ್ಶಿಗಳಾಗಿಯೂ ಹಾಗೂ ಶಂಕರನಾರಾಯಣ ಭಟ್ ಕಿದೂರು, ದಿಲೀಪ್ ಪೆರ್ಲ, ರವಿಕಲಾ ಶೆಟ್ಟಿ ಬಂಬ್ರಾಣ, ರಘು ಮಂಗಲ್ಪಾಡಿ, ಸದಾಶಿವ, ಸುಬ್ಬಣ್ಣ ಭಟ್ ಬಾಯಾರು, ಶಶಿಭೂಷಣ್ ಪೆರ್ಲ ಅವರನ್ನೊಳಗೊಂಡ ಸಂಚಾಲನ ಸಮಿತಿಯನ್ನು ಆಯ್ಕೆಮಾಡಲಾಯಿತು.
ಮುಗು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ವೆಂಕಟ್ರಮಣ ಭಟ್, ಸಹಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ ಗಣೇಶ್ ಪಾರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಸಭೆಯು ಸಹಕಾರ ಭಾರತೀಯ ತಾಲೂಕ ಅಧ್ಯಕ್ಷರಾಗಿ ನಾರಾಯಣ ತುಂಗಾ ವರ್ಕಾಡಿ ಹಾಗೂ ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಬಂಬ್ರಾಣ ಅವರಿಗೆ ಜವಾಬ್ದಾರಿಯನ್ನು ವಹಿಸಲಾಯಿತು.

