ಪೆರ್ಲ:ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತೃ ಸಂಗಮ ಆಶ್ರಯದಲ್ಲಿ ಆ.8 ರಂದು ಮಧ್ಯಾಹ್ನ ಬಳಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಸಜಂಗದ್ದೆ ಶ್ರೀಧರ ಭಟ್ ನೇತೃತ್ವದಲ್ಲಿ ಜರುಗಲಿದ್ದು ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ. ಆಮಂತ್ರಣ ಪತ್ರಿಕೆಯನ್ನು ಮಾತೃ ಮಂಡಳಿ ಅಧ್ಯಕ್ಷೆ ಪ್ರಿಯಾ ಚಾಕಟಕುಮೇರಿ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆ ಗೊಳಿಸಿದರು.ಮಾತೃ ಮಂಡಳಿ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.


