ಕುಂಬಳೆ: ಯು.ಡಿ.ಎಫ್ ಪುತ್ತಿಗೆ ಪಂಚಾಯತಿ ಸಮಿತಿ ನೇತೃತ್ವದಲ್ಲಿ ಕೇರಳ ಎಲ್. ಡಿ. ಎಫ್.ಸರ್ಕಾರದ ಜನವಿರೋಧಿ ನೀತಿಗೆದುರಾಗಿ ಸೀತಾಂಗೋಳಿ ವಿದ್ಯುತ್ ಕಛೇರಿ ಎದುರು ಗುರುವಾರ ಧರಣಿ ನಡೆಸಲಾಯಿತು.
ಧರಣಿಯನ್ನು ಪುತ್ತಿಗೆ ಪಂಚಾಯತಿ ಯು ಡಿ ಎಫ್ ಸಮಿತಿ ಅಧ್ಯಕ್ಷ ಶಾನಿದ್ ಕಯ್ಯಾಂಕುಡೇಲು ಅಧ್ಯಕ್ಷತೆಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ರಾಜ್ಯ ಸರ್ಕಾರದ ಜನದ್ರೋಹ ನೀತಿಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ವಿದ್ಯುತ್ ದರ ಏರಿಸಿದ ಸಿಪಿಎಂ ಸರ್ಕಾರವು ಈ ಹಿಂದಿನ ಯುಡಿಎಫ್ ಸರ್ಕಾರ ಜಾರಿಗೆ ತಂದ ಕಾರುಣ್ಯ ಚಿಕಿತ್ಸಾ ಯೋಜನೆಯನ್ನು ಸ್ಥಗಿತಗೊಳಿಸಿ ಬಡಜನತೆಗೆ ಅನ್ಯಾಯ ಮಾಡಿದೆ ಎಂದು ಅವರು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್ ನಾಯಕರಾದ ಅಬ್ದುಲ್ಲ ಕುಂಞÂ್ಞ ಮುಗು, ಇ. ಕೆ ಮೊಹಮ್ಮದ್ ಕುಂಞÂ್ಞ ಸೀತಾಂಗೋಳಿ, ಎಂ.ಅಬ್ಬಾಸ್, ಸಂಜೀವ.ಸಿ ಬಾಡೂರ್, ರಾಝಿ ಕಯ್ಯಾಂಕುಡೇಲ್, ಯುವ ಕಾಂಗ್ರೆಸ್ ಹಾಗೂ ಯೂತ್ ಲೀಗ್ ನೇತಾರರಾದ ಸಲೀಮ್ ಕಟ್ಟತ್ತಡ್ಕ, ಕಣ್ಣೂರ್ ರಫೀಕ್, ದಿವಾಕರ ಬಾಡೂರ್ ಹಾಗೂ ಕುಂಬಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕಮರುದ್ದೀನ್ ಮತ್ತು ಯು ಡಿ ಎಫ್ ಕಾರ್ಯಕರ್ತರು ಭಾಗವಹಿಸಿದರು. ಯು ಡಿ ಎಫ್ ಸಂಚಾಲಕ ಸಮಿತಿಯ ಇ.ಕೆ ಮೊಹಮ್ಮದ್ ಕುಂಞÂ್ಞ ಸ್ವಾಗತಿಸಿ, ಸಲಿಂ ಕಟ್ಟತ್ತಡ್ಕ ವಂದಿಸಿದರು.


