ಪೆರ್ಲ: ಭಾರತೀಯ ಜನತಾ ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಎಣ್ಮಕಜೆ ಕೊರಗ ಕಾಲನಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಇವರು ಉದ್ಘಾಟಿಸಿದರು. ಮಂಜೇಶ್ವರ ಮಂಡಲ ಬಿಜೆಪಿ ಅಧ್ಯಕ್ಷ ಸತೀಶ್ಚಂದ್ರ ಭಂಡಾರಿ ಕೋಳಾರು, ಪಂಚಾಯತಿ ಉಪಾಧ್ಯಕ್ಷ ರಮಾನಂದ ಎಡಮಲೆ, ಪ್ರಧಾನ ಕಾರ್ಯದರ್ಶಿ ಪದ್ಮಶೇಖರ್ ನೇರೊಳು, ಪಂಚಾಯತಿ ಪ್ರಭಾರಿ ಸತ್ಯಶಂಕರ ಭಟ್ ಹಿಳ್ಳೆಮನೆ, ಪುಷ್ಪಾ ಅಮೆಕ್ಕಳ, ರೂಪವಾಣಿ ಆರ್. ಭಟ್, ಉದಯ ಚೆಟ್ಟಿಯಾರ್, ಸತೀಶ್ ಕುಲಾಲ್, ಸುರೇಶ್ ವಾಣೀನಗರ ಉಪಸ್ಥಿತರಿದ್ದರು. ಕಾಲೋನಿಯ ಸದಸ್ಯರು ಬಿಜೆಪಿ ಸದಸ್ಯರಾಗಿ ನೋಂದಣಿ ಮಾಡಿಕೊಂಡರು.


