ಕುಂಬಳೆ: ಸಾಹಿತಿ, ಶಿಕ್ಷಕಿ ಪರಿಣಿತ ರವಿಯವರ ತೃತೀಯ ಕೃತಿ ಶನಿವಾರ ಸಂಜೆ ಕೊಚ್ಚಿಯ ಕನ್ನಡ ಸಂಘದಲ್ಲಿ ಲೋಕಾರ್ಪಣೆಗೊಂಡಿತು.
ಸಿಂಪರ ಪ್ರಕಾಶನದಿಂದ ಪ್ರಕಾಶಿಸಲ್ಪಟ್ಟ 'ಭಾವಬಿಂದು' 150 ಹನಿಗವನಗಳ ಸಂಕಲನವನ್ನು ಹಿರಿಯ ಉದ್ಯಮಿ ಕೆ.ಎನ್.ಸೂರ್ಯನಾರಾಯಣ ರಾವ್ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಶಿವನಾಥ್ ಕೌಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಿ.ಐ.ಎಫ್.ಟಿ ವಿಜ್ಞಾನಿ ಡಾ. ಶ್ರೀನಿವಾಸ್ ಗೊಪಾಲ್ ಕೃತಿಯ ಮೊದಲ ಪ್ರತಿಯನ್ನು ಸ್ವೀಕರಿಸಿದರು. ಭಾರತೀಯ ವಿದ್ಯಾಭವನದ ಅಧ್ಯಾಪಕಿ ವಿದ್ಯಾ ರವಿಶಂಕರ್ ಕೃತಿ ಪರಿಚಯ ಮಾಡಿದರು. ಕನ್ನಡ ಸಂಘದ ಮಹಿಳಾ ವೇದಿಕೆಯ ಕಾರ್ಯದರ್ಶಿ ಲತಾ ಈಶ್ವರ್ ಕಾರ್ಯಕ್ರಮ ನಿರೂಪಿಸಿದರು. ಕೃತಿಗಾರ್ತಿ ಪರಿಣಿತ ರವಿ ವಂದಿಸಿದರು. ವಿಜ್ಞಾನಿಗಳು, ವೈದ್ಯರು, ಉದ್ಯಮಿಗಳು, ಅಧ್ಯಾಪಕರು ಸಹಿತ ವಿವಿಧ ರಂಗದ ಗಣ್ಯರು ಪಾಲ್ಗೊಂಡ ಈ ಕಾರ್ಯಕ್ರಮ ರಾತ್ರಿಯ ಊಟದ ಬಳಿಕ ಮುಕ್ತಾಯಗೊಂಡಿತು. ಕೊಚ್ಚಿಯಲ್ಲಿ ಬಿಡುಗಡೆಗೊಂಡ ಮೊದಲ ಕನ್ನಡ ಕೃತಿ ಇದು ಎಂಬ ಪ್ರಶಂಸೆಗೆ ಪಾತ್ರವಾಯಿತು.


