ಉಪ್ಪಳ: ರಾಜ್ಯ ಲೈಬ್ರರಿ ಕೌನ್ಸಿಲ್ ವತಿಯಿಂದ ರಾಜ್ಯವ್ಯಾಪಿಯಾಗಿ ನಡೆಯುತ್ತಿರುವ ವಾಚನ ಸಮೀಕ್ಷೆಯ ಮಂಜೇಶ್ವರ ತಾಲೂಕು ಮಟ್ಟದ ಉದ್ಘಾಟನೆ ಬಾಯಾರು ಸಮೀಪದ ಆವಳ ಪಂಜದಲ್ಲಿ ಇತ್ತೀಚೆಗೆ ನಡೆಯಿತು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್ ಸಮಾರಂಭವನ್ನು ಉದ್ಘಾಟಿಸಿದರು. ಪೈವಳಿಕೆ ಗ್ರಾ.ಪಂ.ಸದಸ್ಯ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಅಧ್ಯಕ್ಷತೆ ವಹಿಸಿದ್ದರು. ನಯನಕುಮಾರಿ, ದೇವಕಿ ಉಪಸ್ಥಿತರಿದ್ದರು. ಗ್ರಂಥಾಲಯದವಾಚನಗಳ ಸಮೀಕ್ಷೆಯನ್ನು ಆವಳ ಪಂಜ ಸುಬ್ರಹ್ಮಣ್ಯ ಭಟ್ ಅವರ ನಿವಾಸದಲ್ಲಿ ಸಂಘಟಿಸಲಾಯಿತು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ.ಕೆ ಸ್ವಾಗತಿಸಿ, ರಾಜೀವಿ ಬಾಯಾರು ವಂದಿಸಿದರು. ಶಫೀಕ್ ಕುಂಡೇರಿ ಸಮೀಕ್ಷೆ ನಡೆಸಿದರು.
ಏನಿದು ವಾಚನ ಸಮೀಕ್ಷೆ:
ಮಂಜೇಶ್ವರ ತಾಲೂಕು ಪರಿಧಿಯ 16 ಮನೆಗಳ ಸಮೀಕ್ಷೆಯನ್ನು ಜುಲೈ 30ರೊಳಗೆ ನಡೆಸಲಾಗುವುದು.ಪ್ರಾಥಮಿಕ ವಿವರಗಳು, ಸೇವೆಗಳ ಲಭ್ಯತೆ, ಪುಸ್ತಕ-ನಿಯತಕಾಲಿಕಗಳ ಓದುವಿಕೆ, ಈ-ಪುಸ್ತಕ ಓದುವಿಕೆ, ಸಾರ್ವಜನಿಕ ಗ್ರಂಥಾಲಯಗಳ ಕರ್ತವ್ಯಗಳು ಸಾಮಾಜಿಕ ಜಾಲತಾಣಗಳು ಮೊದಲಾದವುಗಳ ತಳಹದಿಯಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಮೂರು ಸಾವಿರ ಮನೆಗಳಿಗೆ ಒಂದರಂತೆ ನಡೆಯುವ ಓದಿನ ಅಭಿರುಚಿಯ ಈ ಮಹಾ ಆಂದೋಲನವನ್ನು ಯಶಸ್ವಿಗೊಳಿಸಲು ಎಲ್ಲಾ ಗ್ರಂಥಾಲಯಗಳು, ಕಾರ್ಯಕರ್ತರು ಸಹಕರಿಸುವಂತೆ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ವಿನಂತಿಸಿದೆ.


